ಕ್ಷತ್ರಿಯ ಸಮಾಜ ಸರ್ವರಿಗೂ ಮಾದರಿ: ಶಾಸಕ ದೊಡ್ಡಮನಿ
ಶಿರಹಟ್ಟಿ: ಸಮಾಜದ ಹಿತ ಚಿಂತನೆ, ಧಾರ್ಮಿಕ ಆಚರಣೆಗಳಲ್ಲಿ ಕ್ಷತ್ರಿಯ ಸಮಾಜ ಮುಂದಿದ್ದು, ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಶನಿವಾರ ಸಂಜೆ ಪಟ್ಟಣದ ಮರಾಠಾ ಗಲ್ಲಿಯ ಅಂಬಾಭವಾನಿ ಟ್ರಸ್ಟ್ ಕಮಿಟಿ ವತಿಯಿಂದ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಮಹಾನವಮಿ ಮತ್ತು ವಿಜಯದಶಮಿಯ ಎಂಟನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮೀಯರು ಸಮಾಜದ ಉತ್ತಮ ಕೆಲಸ ಕಾರ್ಯದಲ್ಲಿ ಗುರುತಿಸಿಕೊಳ್ಳಬೇಕು. ಧಾರ್ಮಿಕ ಚಟುವಟಿಕೆಗಳಲ್ಲಿ ಸಮಾಜ ಉತ್ತಮ ಸಂಘಟನೆ ಹೊಂದಿದೆ ಎಂದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಮರಾಠಾ ಸಮಾಜ ಬಾಂಧವರು ನನ್ನ ಮೇಲೆ ವಿಶ್ವಾಸವಿಟ್ಟು, ಚುನಾವಣೆಯಲ್ಲಿ ಇದೇ ವಾರ್ಡಿನಿಂದ ಆಯ್ಕೆ ಮಾಡಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಂಪೂರ್ಣ ಬೆಂಬಲ ನೀಡಿದ್ದಾರೆ. ಸಮಾಜ ಮತ್ತು ಜನಸಾಮಾನ್ಯರ ನೋವು-ನಲಿವುಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು. ಅಂಬಾಭವಾನಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಕ್ಷಯಕುಮಾರ ಕದಂ, ಪ.ಪಂ. ಉಪಾಧ್ಯಕ್ಷೆ ಮಿನಾಕ್ಷಿ ತಳವಾರ, ಸದಸ್ಯರಾದ ಹುಮಾಯೂನ ಮಾಗಡಿ, ಚಾಂದಸಾಬ ಮುಳಗುಂದ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ರಾಮಣ್ಣ ಲಮಾಣಿ, ಮಾಜಿ ಮಂಡಳ ಪಂಚಾಯಿತಿ ಅಧ್ಯಕ್ಷ ಡಿ.ಎನ್. ಡಬಾಲಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ವೈ.ಎಸ್. ಪಾಟೀಲ, ಪ.ಪಂ. ಮಾಜಿ ಅಧ್ಯಕ್ಷ ರಾಮಣ್ಣ ಡಂಬಳ, ಸಂತೋಷ ಕುರಿ, ಅಬ್ದುಲಗನಿ ಕುಬುಸದ, ಎನ್.ಆರ್. ಕುಲಕರ್ಣಿ, ಸಿ.ಸಿ. ನೂರಶೆಟ್ಟರ, ನಾಗೇಶ ಮುಧೋಳಕರ, ಅಶೋಕ ಕಲಬುರ್ಗಿ, ಬಸವಣ್ಣೆಪ್ಪ ತುಳಿ, ಮಂಜುನಾಥ ಘಂಟಿ ಮತ್ತಿತರರು ವೇದಿಕೆ ಮೇಲೆ ಇದ್ದರು. ಆರ್.ಎಚ್. ಪರಬತ ಸ್ವಾಗತಿಸಿದರು. ಅನಿಲ ಮಾನೆ ನಿರೂಪಿಸಿದರು. ಪರಮೇಶಿ ಪರಬ ವಂದಿಸಿದರು.