ದೇವಾಂಗ ಸಮುದಾಯ ಅಭಿವೃದ್ಧಿಗೆ ಬದ್ಧ: ಪಾಟೀಲ್
ಗಜೇಂದ್ರಗಡ: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ದೇವಾಂಗ ಸಮುದಾಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸ್ಥಳೀಯ ಗಂಜಿ ಪೇಟೆ ಬಳಿಯ ಬನಶಂಕರಿ ದೇವಿ ಪುರಾಣ ಮಂಗಲೋತ್ಸವ ಸಮಾರಂಭದಲ್ಲಿ ದೇವಾಂಗ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೇವಲ ನೇಕಾರಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ದೇವಾಂಗ ಸಮಾಜ ಬಾಂಧವರಲ್ಲಿ ಸಂಘಟನೆ ಕೊರತೆ ಜತೆ ಸಮುದಾಯ ಹಲವಾರು ಒಳಪಂಗಡಗಳಾಗಿರುವುದು ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗಿದೆ ಎಂದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ಸಮಾಜ ಮುಖಂಡ ವಿ.ಎನ್. ಸೊನ್ನದ ಹಾಗೂ ಮುಖಂಡ ವೀರಣ್ಣ ಶೆಟ್ಟರ ಮಾತನಾಡಿದರು. ವಿ.ಆರ್. ಗುಡಿಸಾಗರ, ಪುರಸಭಾ ಸದಸ್ಯೆ ಸುಜಾತಾ ಚುಂಚಾ, ಸಮಾಜ ಅಧ್ಯಕ್ಷ ನಿಂಗನಗೌಡ ಗಂಜಿ, ಎಸ್.ಎಂ. ಆರಗಿದ್ದಿ, ಶ್ರೀಧರ ಬಿದರಳ್ಳಿ, ಕಾಶಿನಾಥ ಜುಜಾರೆ, ಬಸವರಾಜ ಸೂಡಿ, ಮುದಕಪ್ಪ ಬುಟ್ಟಾ, ಗೋಪಾಲ ಕೆಂಚಿ, ಶ್ರೀಧರ ಗಂಜಿಗೌಡ್ರ, ಕೊಟ್ರೇಶ ಚಿಲಕಾ, ಮುರ್ತುಜಾ ಡಾಲಾಯತ್, ಅಜ್ಜಪ್ಪ ಹವಳದ, ಗೋಪಾಲ ಲಾಳಿ, ಪ್ರಭು ಶಲ್ಲೇದ, ವಿ.ಬಿ. ಹಪ್ಪಳದ, ಉಮೇಶ ರಾಠೋಡ ಉಪಸ್ಥಿತರಿದ್ದರು. ಎನ್.ವಿ. ಚವ್ಹಾಣ ಸ್ವಾಗತಿಸಿದರು, ಎಸ್.ಎನ್. ಕೊಪ್ಪರದ ನಿರೂಪಿಸಿದರು. ಪ್ರಕಾಶ ಗಂಜಿಗೌಡ್ರ ವಂದಿಸಿದರು.