ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧರ್ಮ ಪಥದಲ್ಲಿ ಮುನ್ನಡೆದರೆ ನೆಮ್ಮದಿ

Mainashree
Updated On : 15 Oct 2013, 11:49 am

ಗದಗ: ಧರ್ಮ ಪಥದಲ್ಲಿ ಮುನ್ನಡೆದರೆ ನಮ್ಮ ಬದುಕು ನೆಮ್ಮದಿ ಮತ್ತು ಆದರ್ಶವಾಗುವುದು ಎಂದು ಗದಗ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕವಿತಾ ದಂಡಿನ ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ರಾಜೀವಗಾಂಧಿ ನಗರದ ಬನ್ನಿಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ಈಚೆಗೆ ಬನ್ನಿಮಹಾಂಕಾಳಿ ದೇವಿಯ ಜೀರ್ಣೋದ್ಧಾರ ಸಮಿತಿಯಿಂದ ಏರ್ಪಡಿಸಿದ್ದ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಮಹಿಳೆಯನ್ನು ಆದಿ ಶಕ್ತಿ ಎಂದು ಪ್ರೀತಿ, ಕರುಣೆ, ಮಮತಾಮಯಿ ಎಂದೂ ಬಣ್ಣಿಸಲಾಗಿದೆ. ಮಹಿಳೆ ಮಮತೆಯ ಖಣಿ, ತಾಯಿಯಾಗಿ ಪ್ರೀತಿ ವಾತ್ಸಲ್ಯ ತೋರುತ್ತಾಳೆ. ಸಂಸಾರದಲ್ಲಿ ಸಮಾಜದಲ್ಲಿ ಮಹಿಳೆಗೆ ಮಹತ್ವದ ಸ್ಥಾನ  ನೀಡಲಾಗಿದೆ. ಒಳ್ಳೆಯ ಸಂಸ್ಕಾರ ಬಿತ್ತುವ, ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿ ನಿಜ ಬದುಕಿನ ಅರಿವನ್ನು ಆಕೆ ನೀಡಬಲ್ಲಳು. ಇಂತಹ ಪೂಜ್ಯನೀಯ ಸ್ಥಾನ ಪಡೆದಿರುವ ಮಹಿಳೆಯ ಮೇಲೆ ಹಲವು ರೀತಿಯ ಶೋಷಣೆ, ಅಮಾನವೀಯ ಕೃತ್ಯಗಳು ನಡೆಯುತ್ತಿರುವುದು ವಿಷಾದನೀಯ. ಧರ್ಮ, ದೇವರು, ಮಾನವೀಯ ಸಂಬಂಧಗಳನ್ನು ಮರೆತು ನಡೆಯುತ್ತಿದ್ದೇವೆ. ಧರ್ಮ ಪಥದಲ್ಲಿ ಮುನ್ನಡೆಯುವ ಸಂಸ್ಕಾರಯುತ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು. ಎಲ್.ಡಿ. ಚಂದಾವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾರ್ವತಿಬಾಯಿ ಕನಕೇರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗಿರಿಜಾಬಾಯಿ ತಳಕಲ್, ಬಾಗಿರಥಿ ಪಾಟೀಲ, ದ್ರಾಕ್ಷಾಯಿಣಿಬಾಯಿ ಶಿರೂರ, ಪ್ಯಾರಜಾನ್ ಹಬ್ಬುನವರ, ಸುಮಾ ಬಾರಕೇರ, ಸುಜಾಜಾ ಕೋಟಿ, ಪ್ರೇಮಾ ಹುಂಬಿ, ಶಕುಂತಲಾ ಕಣವಿ, ಪಾರ್ವತಿ ಹಾವನೂರ, ಯಲ್ಲಮ್ಮ ಪೂಜಾರ, ಶಾರದಾ ಹಡಪದ, ಮೀನಾಕ್ಷಿ ಸಕ್ರಿ, ತುಳಜಾ ಚವ್ಹಾಣ, ಪ್ರೇಮಾ ಬಾವಿಕಟ್ಟಿ, ಅನ್ನಪೂರ್ಣ ಗುಳಬಾಳ, ಗಂಗಾಬಾಯಿ ಕುರಿ, ಮೌಲಾನಬಿ ಕೊಟ್ಟೂರ, ಚನ್ನಮ್ಮ ಗಾಮನಕಟ್ಟಿ, ವಿಜಯಲಕ್ಷ್ಮೀ ಕರವೀರಶೆಟ್ಟಿ, ಭಾಗೀರಥಿ ಪಾಟೀಲ, ಪ್ರೀತಿ ಚಂದಾವರಿ ಮುಂತಾದವರು ಉಪಸ್ಥಿತರಿದ್ದರು. ಉಳವೇಶ ಅಂಗಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement