ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೆರೆಯಲ್ಲಿ ಮುಳುಗಿ ಬಾಲಕ ಸಾವು

Lingaraj Badiger
Updated On : 16 Oct 2013, 11:34 am

ಗಜೇಂದ್ರಗಡ:  ಪಟ್ಟಣದ ಗುಡ್ಡದ ಬಳಿ ನಿರ್ಮಿಸಿರುವ ನೂತನ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿ ನೀರಿನಾಳಕ್ಕೆ ಸಿಲುಕಿ ಬಾಲಕನೋರ್ವ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
ಈಚೆಗೆ ಸುರಿದ ಮಳೆಯಿಂದಾಗಿ ಕೆರೆಯಲ್ಲಿ ನೀರು ತುಂಬಿದ ಪರಿಣಾಮ ಕೆರೆಯಲ್ಲಿ ಈಜಲು ತನ್ನ ಸ್ನೇಹಿತರೊಂದಿಗೆ ಬೆಳಗ್ಗೆ ಹೋದ ಶಿವಪ್ರಸಾದ ಮೆಣಸಿನಕಾಯಿ (13) ಎಂದು ಗುರುತಿಸಲಾಗಿದೆ. ಬಹಳ ಹೊತ್ತಿನವರೆಗೂ ಮನೆಗೆ ಬಾರದಿರುವ ಬಗ್ಗೆ ಪೋಷಕರಲ್ಲಿ ಆತಂಕ ಮೂಡಿತ್ತು. ಅಕ್ಕ ಪಕ್ಕದವರನ್ನು ವಿಚಾರಿಸಿದಾಗ ಕೆರೆಯಲ್ಲಿ ಈಜಲು ತೆರಳಿದ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಪೋಷಕರು ಕೆರೆಯತ್ತ ಧಾವಿಸಿದರು.
ಅಷ್ಟೊತ್ತಿಗಾಗಲೇ ಕೆಲವರು ಕೆರೆಯಲ್ಲಿ ಶವ ಶೋಧನೆಗೆ ಮುಂದಾಗಿದ್ದರು. ಸತತ 2 ಗಂಟೆಗೂ ಹೆಚ್ಚುಕಾಲ ಶವಕ್ಕಾಗಿ ಶೋಧ ನಡೆಸಿದ ಬಳಿಕ ಬಾಲಕನ ಶವ ದೊರೆಯಿತು. ಈ ಕುರಿತು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿನೀರು ಬಿದ್ದು ಮಗು ಸಾವು
ಗದಗ:  ಒಂದು ವರ್ಷದ ಮಗು ಅಡುಗೆ ಮನೆಯಲ್ಲಿ ಒಲೆಯ ಮೇಲೆ ಕಾಯಿಸಲು ಇಟ್ಟಿದ್ದ ಬಿಸಿ ನೀರು ಇದ್ದ ಡಬರಿ ಜಗ್ಗಿದ ಪರಿಣಾಮ ಬಿಸಿ ನೀರು ಮಗುವಿನ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿರುಂದ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಾರ್ತಿಕ ಮಲ್ಲೇಶಪ್ಪ ಬಂಡಿವಡ್ಡರ ಮೃತ ಮಗುವಾಗಿದ್ದು, ತೀವ್ರ ಗಾಯಗೊಂಡಿದ್ದ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement