ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೆತ್ತವರನ್ನು ಗೌರವದಿಂದ ಕಾಣಿ: ಬೆಲ್ಲದ

Lingaraj Badiger
Updated On : 16 Oct 2013, 11:45 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 15
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳಿಸದೆ, ಕಾಳಜಿ ವಹಿಸಿ ಚೆನಾಗಿ ನೋಡಿಕೊಳ್ಳಬೇಕು ಎಂದು ಜ. ಅನ್ನದಾನ ವಿದ್ಯಾ ಪ್ರಸಾರಕ ಸಮಿತಿಯ ಗೌರವ ಕಾರ್ಯದರ್ಶಿ ಅಂದಪ್ಪ ಬೆಲ್ಲದ ಹೇಳಿದರು.
ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದಲ್ಲಿ ಜ. ಅನ್ನದಾನ ಸಂಯುಕ್ತ ಪಪೂ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಮ್ಮಿಕೊಂಡಿರುವ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಬಿರದ ಮೂಲಕ ಹೊಸ ಮನುಷ್ಯರಾಗಬೇಕು. ತಮ್ಮಲ್ಲಿರುವ ಕೆಟ್ಟ ಗುಣಗಳನ್ನು ಬಿಟ್ಟು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.
ಕೆ.ಆರ್. ಬೆಲ್ಲದ ಕಾಲೇಜಿನ ಕಾಲೇಜು ಕಮಿಟಿ ಕಾರ್ಯಾಧ್ಯಕ್ಷ ಆರ್.ಬಿ. ಡಂಬಳಮಠ, ಉಪ ಕಾರ್ಯಾಧ್ಯಕ್ಷ ಕಾಂತರಾಜ ಹಿರೇಮಠ, ಸಂಸ್ಥೆಯ ವಿಶೇಷ ಅಧಿಕಾರಿ ಪ್ರೊ೤ ಎಸ್.ಎಂ. ಹೊಸಮಠ, ಪುರಸಭೆಯ ಸದಸ್ಯ ಸಣ್ಣಸೋಮನಗೌಡ ಗೌಡ್ರ, ದೇವೇಂದ್ರಪ್ಪ ಭಂಡಾರಿ, ಕೆಂಚನಗೌಡ ಗೌಡರ, ಕೃಷ್ಣಗೌಡ ಪಾಟೀಲ ಮಾತನಾಡಿದರು. ನಿಸ್ಸಾರ ಮಿರ್ಜಿ ಮತ್ತು ಲಕ್ಷ್ಮಣ ಮುರಡಿ ಅವರಿಗೆ ಉತ್ತಮ ಸ್ವಯಂ ಸೇವಕ ಪ್ರಶಸ್ತಿ ನೀಡಲಾಯಿತು. ಪ್ರಾ. ವಿ.ಎಫ್. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕರಬಸಪ್ಪ ಹಂಚಿನಾಳ, ಯಲ್ಲನಗೌಡ ಕೊರ್ಲಹಳ್ಳಿ, ನೀಲಪ್ಪ ಹರಿಜನ, ಸುರೇಶ ಭಂಡಾರಿ, ಪ್ರಕಾಶ ಗೌಡ್ರ, ಬಸವರಾಜ ಪಾಟೀಲ, ಶಿದ್ಲಿಂಗಪ್ಪ ರಾಜೂರ, ನಾಗರಾಜ ಹೆಸರೂರ, ಹಾಲಪ್ಪ ವಾಲಿಕಾರ ಇದ್ದರು. ಕಾರ್ಯಕ್ರಮಾಧಿಕಾರಿ ಪ್ರೊ೤ ಸಿ.ಎಸ್. ಅರಸನಾಳ ಸ್ವಾಗತಿಸಿದರು. ವೀರೇಶ ಚೆನ್ನಳ್ಳಿ ನಿರೂಪಿಸಿದರು. ಬಸವರಾಜ ಮುತ್ತಗಿ ವಂದಿಸಿದರು.

ವೇದಿಕೆ ನೊಂದವರ ಧ್ವನಿಯಾಗಲಿ: ಸುಬ್ರಹ್ಮಣ್ಯಂ
ಗದಗ: ಸಮಾಜದಲ್ಲಿನ ನೊಂದವರ, ಬಡವರ, ದೀನ-ದಲಿತರ ಧ್ವನಿಯಾಗಿ ನವಕರ್ನಾಟಕ ಜನಪರ ವೇದಿಕೆ ಕೆಲಸ ಮಾಡಲಿದೆ ಎಂದು ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಸುಬ್ರಹ್ಮಣ್ಯಂ ರೆಡ್ಡಿ ಹೇಳಿದರು.
ಅವರು ನಗರದ ಕಾಟನ್ ಮಾರ್ಕೆಟ್ ರಸ್ತೆಯಲ್ಲಿರುವ ಸೌಜನ್ಯ ಮಳಿಗೆಯಲ್ಲಿ ಸೋಮವಾರ ವೇದಿಕೆಯ ಜಿಲ್ಲಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.  ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಮಾತನಾಡಿದರು. ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್. ರಡ್ಡೆರ, ರಾಜ್ಯ ಪ. ಜಾತಿ ಘಟಕದ ಅಧ್ಯಕ್ಷ ರಾಮು ಬಳ್ಳಾರಿ, ಎಂ.ಎಸ್. ರಡ್ಡೆರ, ರಾಜ್ಯ ಕಾರ್ಯದರ್ಶಿ ಎನ್.ಕೆ. ಕೊರ್ಲಹಳ್ಳಿ, ಅಬ್ದುಲ್‌ಖಾದರ ಗಡಾದ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಐ. ಮುಳಗುಂದ, ಉಪಾಧ್ಯಕ್ಷ ಎಂ.ಎಸ್. ಪರ್ವತಗೌಡರ, ರಾಜಶೇಖರ ಕಾತರಕಿ ಇದ್ದರು. ಎನ್.ಕೆ. ಕೊರ್ಲಹಳ್ಳಿ ಸ್ವಾಗತಿಸಿ, ನಿರೂಪಿಸಿದರು. ವೆಂಕಟೇಶ ಕಾಟಿಗಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement