ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಶಿವಾನುಭವ

Lingaraj Badiger
Updated On : 17 Oct 2013, 11:54 am

ನರಗುಂದ:  ತಾಲೂಕಿನ ಭೈರನಹಟ್ಟಿ ಗ್ರಾಮದ ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ದೊರಸ್ವಾಮಿ ವಿರಕ್ತಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅ. 17ರಂದು ಸಂಜೆ 6 ಗಂಟೆಗೆ ದೊರೆಸ್ವಾಮಿ ವಿರಕ್ತಮಠದಲ್ಲಿ 219ನೇ ಮಾಸಿಕ ಶಿವಾನುಭವ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಮಠದ ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಹೆಬ್ಬಾಳ ಹಿರೇಮಠದ ವೀರೇಶ್ವರ ದೇವರು, ಐ.ಆರ್. ಹಡಗಲಿ, ಅಧ್ಯಕ್ಷ ಡಿ.ಎಚ್. ಅಜ್ಜಿ, ರಾಜ್ಯ ಪರಿಷತ್ ಸದಸ್ಯ ವಿ.ಆರ್. ಸಂಗಮಿ, ಕಾರ್ಯದರ್ಶಿ ಎಂ.ವಿ. ಚಳಗೇರಿ, ಸಂಘಟನಾ ಕಾರ್ಯದರ್ಶಿ ಎ.ಸಿ. ಹಿರೇನಿಂಗನಗೌಡ್ರ, ಖಜಾಂಚಿ ಎಂ.ಜಿ. ಪಾಟೀಲ, ಶಿಕ್ಷಕ ಕೆ.ಬಿ. ಅರಕೇರಿ, ಪೂಜಾ ಬೇವೂರ ಭಾಗವಹಿಸುವರು.
ಇಂದಿನಿಂದ ವಿದ್ಯುತ್ ವ್ಯತ್ಯಯ
ಮುಂಡರಗಿ: ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಡಂಬಳ 110 ಕೆವಿ ವಿದ್ಯುತ್ ಉಪಕೇಂದ್ರದಿಂದ ಮುಂಡರಗಿ ಉಪಕೇಂದ್ರದವರೆಗೆ ಒಂಟಿ ಮಾರ್ಗದ ಜತೆಗೆ ಇನ್ನೊಂದು ಹೆಚ್ಚುವರಿ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯನ್ನು ಕೈಗೊಂಡಿದ್ದು, ಅ. 17 ರಿಂದ 25 ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮುಂಡರಗಿ 110 ಕೆವಿ ವಿದ್ಯುತ್ ಉಪಕೇಂದ್ರ ಮತ್ತು ಸಿಂಗಟಾಲೂರು 33 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಹಾಗೂ ಕೊಪ್ಪಳ ಬೆಟಗೇರಾ ವಿದ್ಯುತ್ ಉಪಕೇಂದ್ರಕ್ಕೆ ಸಂಬಂಧಪಟ್ಟ ಎಲ್ಲ ಶಹರ ಮತ್ತು ಗ್ರಾಮೀಣ ಹಾಗೂ ಕುಡಿವ ನೀರಿನ ಯೋಜನೆಯ ಪ್ರದೇಶದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಮೀಣರಿಗೆ ಬೆಳಗ್ಗೆ 3 ರಿಂದ 9 ಗಂಟೆಯ ವರೆಗೆ 3 ಫೇಸ್ ಉಳಿದ ಅವಧಿಯಲ್ಲಿ ಸಿಂಗಲ್ ಫೇಸ್ ವಿದ್ಯುತ್ ಇರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement