ಕುಂಕುಮಾರ್ಚನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಅ. 16
ಮುತ್ತೈದೆ ಯಾವಾಗಲೂ ಬೇಡುವುದು ತನ್ನ ಸೌಭಾಗ್ಯವನ್ನು. ಶ್ರೀದೇವಿಯನ್ನು ಸ್ತುತಿಸಿ ಕುಂಕುಮಾರ್ಚನೆ ಮಾಡುವದರಿಂದ ಅವಳ ಸೌಭಾಗ್ಯ ನಿಜಕ್ಕೂ ಅಭಿವೃದ್ಧಿಯಾಗುತ್ತದೆ ಎಂದು ಬಿಜಾಪುರದ ಪುರಾಣ ಪ್ರವಚನಕಾರ ರವೀಂದ್ರಾಚಾರ ಕಂಚಗಾರ ಹೇಳಿದರು.
ಇಲ್ಲಿನ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಲಲಿತಾ ಪಂಚಮಿ ನಿಮಿತ್ತ ನಡೆದ ಕುಂಕುಮಾರ್ಚನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ದುರ್ಗಾಷ್ಟಮಿಯಂದು ಬೆಳಗ್ಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಅಂದೇ ಮಧ್ಯಾಹ್ನ ಸಾಮೂಹಿಕ ಉಪನಯನ ಕಾರ್ಯಕ್ರಮಗಳು ಜರುಗಿದವು. 13ರಂದು ಬೆಳಗ್ಗೆ ನವಕನ್ನಿಕೆಯರ ಪೂಜೆ, ಸಾಯಂಕಾಲ ಆಯುಧ ಪೂಜೆ ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಸೋಮವಾರದಂದು ವಿಜಯದಶಮಿ ನಿಮಿತ್ತ ಶ್ರೀದೇವಿಯ ಉತ್ಸವ ಮೂರ್ತಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಕಾಳಿಕಾ ದೇವಸ್ಥಾನದಲ್ಲಿ ಸಂಪನ್ನಗೊಳ್ಳುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ರಮದೊಂದಿಗೆ ವಿಜಯ ದಶಮಿ ಹಬ್ಬಕ್ಕೆ ತೆರೆ ಬಿತ್ತು.