ನಾಳೆ 52ನೇ ಮಾಸಿಕ ಶಿವಾನುಭವ
ಗದಗ: ನಗರದ ನೀಲಮ್ಮತಾಯಿ ಆಶ್ರಮದಲ್ಲಿ ಅ. 18 ರಂದು ಸಂಜೆ 7 ಗಂಟೆಗೆ 52ನೇ ಮಾಸಿಕ ಶಿವಾನುಭವ ಹಮ್ಮಿಕೊಳ್ಳಲಾಗಿದೆ. ನಂದಪ್ಪ ಗುಡಿಸಾಲಿ ಅಧ್ಯಕ್ಷತೆ ವಹಿಸುವರು. ಶಿವಾನುಭವದಲ್ಲಿ ರುದ್ರಪ್ಪಶಾಸ್ತ್ರಿ ಮತ್ತಿಕಟ್ಟಿ ಅವರಿಂದ ಮಹಾಲಿಂಗಲೀಲೆ ಎಂಬ ಶಿವಕೀರ್ತನೆ ಜರುಗುವುದು. ಡಾ. ಎಸ್.ಕೆ. ಮ್ಯಾಗೇರಿ, ಬಿಳಿಯಲೆ ಮುಂತಾದವರು ಪಾಲ್ಗೊಳ್ಳುವರೆಂದು ಸಮಿತಿಯ ಅಧ್ಯಕ್ಷ ಬಿ.ಬಿ. ಭಾವಿಕಟ್ಟಿ, ಉಪಾಧ್ಯಕ್ಷೆ ಶಾರದಾ ಕಾತರಕಿ, ಕಾರ್ಯದರ್ಶಿ ಎಸ್.ಬಿ. ದೊಡ್ಡಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.