ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿಪ್‌ಜಾರಿ

Lingaraj Badiger
Updated On : 17 Oct 2013, 12:01 pm

ಗದಗ:  ಅ. 21ರಂದು ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುತ್ತಿದ್ದು, ಹಾಗಾಗಿ ಜಿಪಂ ಸದಸ್ಯರಾಗಿರುವ ಎಂ.ಎಸ್. ಪಾಟೀಲ ಅವರು ಅ. 21 ರಂದು ನಡೆಯುವ ಅವಿಶ್ವಾಸ ಗೊತ್ತುವಳಿ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು. ಮತ್ತು ಬಿಜೆಪಿಯ ಆದೇಶದ ಪ್ರಕಾರ ನಡೆದುಕೊಳ್ಳಬೇಕು ಎಂದು ಬುಧವಾರ ವಿಪ್ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಎಂ.ಎಸ್. ಕರಿಗೌಡ್ರ, ಸಂಗಮೇಶ ದುಂದೂರ, ಲಿಂಗನಗೌಡ ಹರ್ತಿ, ಜಗನರಾಜ ಪುರೋಹಿತ ಉಪಸ್ಥಿತರಿದ್ದರು.
ಇಂದು ವಾರ್ಷಿಕೋತ್ಸವ
ಗದಗ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಿಂದೂ ಸುಡಗಾಡು ಸಿದ್ಧರ ಹಳೆ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿ ಸಂಸ್ಥೆ (ಎಸ್.ಸಿ.) ವತಿಯಿಂದ ಅ. 17ರ ಬೆಳಗ್ಗೆ 10.30ಕ್ಕೆ ಸ್ಥಳೀಯ ಕಳಸಾಪುರ ರಸ್ತೆಯಲ್ಲಿರುವ ಶ್ರೀರಾಮನಗರದಲ್ಲಿರುವ ಸಂಸ್ಥೆಯ ಸಭಾಭವನದಲ್ಲಿ ಸಂಸ್ಥೆಯ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜ. ಅಭಿನವ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸುವರು. ನಗರಸಭೆ ಪೌರಾಯುಕ್ತ ಎಂ.ಬಿ. ನಡುವಿನಮನಿ ಉದ್ಘಾಟಿಸುವರು. ಸಂಸ್ಥೆಯ ಗೌರವಾಧ್ಯಕ್ಷ ಅನಿಲ ಗರಗ ಅಧ್ಯಕ್ಷತೆ ವಹಿಸುವರು.  ಮಾಜಿ ಶಾಸಕ ಡಿ.ಆರ್. ಪಾಟೀಲ, ವಿಜಯಕುಮಾರ ಗಡ್ಡಿ, ಜಯದೇವ ಮೆಣಸಗಿ, ಖಾಜಾಹುಸೇನ ಮುಧೋಳ, ಗೋವಿಂದ ಭಟ್, ಬನಶಂಕರಿ ಅಂಗಡಿ ಮುಂತಾದವರು ಪಾಲ್ಗೊಳ್ಳುವರು.
ಇಂದು ಕಟ್ಟಡ ಉದ್ಘಾಟನೆ
ಮುಂಡರಗಿ:  ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಕರ್ನಾಟಕ ಆರೋಗ್ಯ ಪದ್ಧತಿ, ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ ಮತ್ತು ತಾಲೂಕು ಆರೋಗ್ಯ ಇಲಾಖೆ ತಾಪಂ ಮುಂಡರಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಗೇವಾಡಿ, ಗ್ರಾಪಂ ಬಾಗೇವಾಡಿ ಆಶ್ರಯದಲ್ಲಿ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನೂತನ ಉಪಕೇಂದ್ರದ ಕಟ್ಟಡ ಉದ್ಘಾಟನಾ ಸಮಾರಂಭವು ಅ. 17ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸುವರು. ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎಂ.ಎಸ್. ಪಾಟೀಲ, ಶಿವಕುಮಾರ ಉದಾಸಿ ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ರಮೇಶ ಮುಂದಿನಮನಿ, ಎಂ.ಎಸ್. ದೊಡ್ಡಗೌಡ್ರ, ತಾರೂಬಾಯಿ ಚವ್ಹಾಣ, ಅಕ್ಕಮಹಾದೇವಿ ಹಾರೋಗೇರಿ, ಕಸ್ತೂರೆಮ್ಮ ಪಾಟೀಲ, ರಾಜಶೇಖರ ರಾಠೋಡ, ಲಕ್ಷ್ಮವ್ವ ಕೆಂಪ್ಲ, ತಿಪ್ಪವ್ವ ಪವಾರ, ಮಿಥುನಗೌಡ ಪಾಟೀಲ, ಟಿ.ಬಿ. ಮೇಟಿ, ಹೇಮಂತಗೌಡ ಪಾಟೀಲ, ರವಿ ದಂಡಿನ, ಬಸವಂತಪ್ಪ ಶಿರಹಟ್ಟಿ, ಹನುಮಂತಗೌಡ ಪಾಟೀಲ  ಉಪಸ್ಥಿತರಿರುವರು ಎಂದು ತಾಲೂಕು ಪ್ರಭಾರಿ ವೈದ್ಯಾಧಿಕಾರಿ ಸುಭಾಸ ದೈಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement