ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸೇವೆಗೆ ತ್ಯಾಗಗುಣ ಅವಶ್ಯ: ದೊಡ್ಡಮನಿ

Lingaraj Badiger
Updated On : 17 Oct 2013, 11:53 am

ಮುಂಡರಗಿ: ಛಲ ಮತ್ತು ಪ್ರಯತ್ನಪಟ್ಟರೆ ಎಂತಹ ಕೆಲಸವನ್ನಾದರೂ ಸುಲಭವಾಗಿ ಸಾಧಿಸಲು ಸಾಧ್ಯ. ಸಮಾಜ ಚಿಕ್ಕದಿರಲಿ ದೊಡ್ಡದಿರಲಿ ಸೇವೆಗೆ ತ್ಯಾಗಗುಣ ಅವಶ್ಯ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಪಟ್ಟಣದ ದೇವಾಂಗ ಸಮಾಜದ ಆಶ್ರಯದಲ್ಲಿ ಸ್ಥಳೀಯ 15ನೇ ವಾರ್ಡ್‌ನಲ್ಲಿ ಆಯೋಜಿಸಿದ್ದ ದೇವಿಪುರಾಣ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭ ಶಾಸಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ರಾಮಣ್ಣ ಹಡಗಲಿ ಮಾತನಾಡಿ, ಪ್ರಗತಿಪಥದಲ್ಲಿರುವ ದೇವಾಂಗ ಸಮುದಾಯ ಭವನಕ್ಕೆ ಶಾಸಕರು 5 ಲಕ್ಷ ಅನುದಾನ ನೀಡಬೇಕು, ದೇವಾಂಗ ಸಮಾಜದವರು ಹಿಂದುಳಿದವರಾಗಿದ್ದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಇತರ ಶುಭ ಕಾರ್ಯಕ್ಕೆ ಸಮುದಾಯ ಭವನದ ಅವಶ್ಯಕತೆಯಿದೆ. ಹೀಗಾಗಿ ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಉಮೇಶ ಹಡಗಲಿ, ನಾರಾಯಣಪ್ಪ ಗುಬ್ಬಿ, ನಾಗರಾಜ ಭೂತನವರ, ಪುರಸಭೆ ಸದಸ್ಯ ಶಂಕರಗೌಡ ಪಾಟೀಲ, ಶಿರಹಟ್ಟಿ ತಾಪಂ ಸದಸ್ಯ ಕೋಟೆಪ್ಪ ವರ್ದಿ, ಶಂಕ್ರಮ್ಮ ಹಡಗಲಿ, ಎಂ.ಯು. ಮಕಾನದಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement