ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಳಪೆ ಬೀಜ ನೀಡಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ

Mainashree
Updated On : 18 Oct 2013, 11:24 am

ಗದಗ: ಕಳಪೆ ಬಿಟಿ ಹತ್ತಿ ಬೀಜ ವಿತರಣೆ ಮಾಡಿದ್ದು, ರೈತರು ಈಗ ಸಂಕಷ್ಟ ಅನುಭವಿಸುತ್ತಿದ್ದು, ಈ ಕುರಿತು ಕಳಪೆ ಕನಕ ಬಿಟಿ ಹತ್ತಿ ಬೀಜವನ್ನು ಪೂರೈಕೆ ಮಾಡಿದ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ನಗರದ ಕೃಷಿ ಇಲಾಖೆ ಕಚೇರಿಯ ಎದುರು ರೈತರು ಬಿಟಿ ಹತ್ತಿ ಪ್ರದರ್ಶನ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಕಳೆದ ಕೆಲವು ತಿಂಗಳುಗಳ ಹಿಂದೆ ಕೃಷಿ ಇಲಾಖೆಯು ಸಾವಿರಾರು ಹಣ ರೈತರಿಂದ ಪಡೆದು ಈ ಕನಕ ಬಿಟಿ ಹತ್ತಿ ಬೀಜ ಪೂರೈಸಿತ್ತು. ಕೃಷಿ ಇಲಾಖೆಯಿಂದ ಪೂರೈಸಿದ ಬಿಟಿ ಹತ್ತಿ ಬೀಜಗಳು ಗುಣಮಟ್ಟದ್ದಾಗಿರುತ್ತವೆ ಎಂಬ ಕಾರಣದಿಂದಾಗಿ ನೂರಾರು ರೈತರು ತಮ್ಮ ಹೊಲಗಳಲ್ಲಿ ಈ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ಜತೆಗೆ ಈ ಬಿಟಿ ಹತ್ತಿಗೆ ಬೇಕಾದ ಅಗತ್ಯ ಗೊಬ್ಬರವನ್ನು ಪೂರೈಕೆ ಮಾಡಿದ್ದು, ಈಗ ಎದೆ ಅಳತೆಯಷ್ಟು ಹತ್ತಿಗಿಡಗಳು ಬೆಳೆದಿವೆ. ಆದರೆ ಇಲ್ಲಿಯವರೆಗೂ ಒಂದೂ ಹತ್ತಿ ಕಾಯಿ ಬಿಡದೇ ಬರಡಾಗಿ ನಿಂತಿವೆ.
ಸಾವಿರಾರು ಹಣ ಖರ್ಚು ಮಾಡಿ ಕನಕ ಬಿಟಿ ಹತ್ತಿ ಬೀಜವನ್ನು ಖರೀದಿಸಿರುವುದು ಒಂದೆಡೆಯಾದರೆ, ಉತ್ತಮ ಫಸಲು ನೀಡಲು ಅಪಾರ ಖರ್ಚು ಮಾಡಿ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಖರೀಧಿಸಿ ಬಿತ್ತನೆ ಮಾಡಲಾಗಿದ್ದು, ಇತ್ತ ರೈತರು ತಂದ ಬಿಟಿ ಹತ್ತಿ ಬೀಜದ ಹಣ ಹಾಗೂ ಗೊಬ್ಬರದ ಹಣವೂ ಬರದಂತಾಗಿದೆ. ಇದರಿಂದ ಸಾಲ ಸೋಲ ಮಾಡಿ ಬೆಳೆದಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಕನಕ ಬಿಟಿ ಹತ್ತಿ ಪೂರೈಕೆ ಮಾಡಿದ ಅಧಿಕಾರಿಗಳ ಹಾಗೂ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ರೈತರಿಗೆ ಅಗತ್ಯ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement