ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧರ್ಮಸ್ಥಳ ಕ್ಷೇತ್ರದ ಅವಹೇಳನ ಸಲ್ಲದು: ಜ. ತೋಂಟದ ಶ್ರೀ

Mainashree
Updated On : 18 Oct 2013, 11:26 am

ಕನ್ನಡಪ್ರಭ ವಾರ್ತೆ, ಗದಗ, ಅ. 17
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನ ಸಲ್ಲದು ಎಂದು ತೋಂಟದ ಡಾ. ಸಿದ್ಧಲಿಂಗ ಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೀರೇಂದ್ರ ಹೆಗ್ಗಡೆಯವರು ಪ್ರಗತಿಪರ ಮನೋಭಾವನೆ ಹೊಂದಿದವರು. 4 ದಶಕಗಳಿಂದ ಅವರ ಸಾಮಾಜಿಕ ಸೇವೆಯನ್ನು ಹತ್ತಿರದಿಂದ ನಾವು ಗಮನಿಸುತ್ತಾ ಬಂದಿದ್ದೇವೆ. ಧರ್ಮಸ್ಥಳದೆಡೆಗೆ ಭಕ್ತಿಯಿಂದ ಹರಿದು ಬಂದ ಜನಸಾಗರವನ್ನು ಸನ್ಮಾರ್ಗದಲ್ಲಿ ನಡೆಸಿದ ಕೀರ್ತಿ ಅವರಿಗೆ ಸಲ್ಲಬೇಕು. ಅವರು ಕ್ಷೇತ್ರದ ಸಂಪ್ರದಾಯದ ಜತೆಯಲ್ಲಿ ಆಧನೀಕತೆಯನ್ನು ಬೆಸೆದ ರೀತಿ ಬೆರಗುಗೊಳಿಸುವಂತಹದ್ದು.
ಅದಕ್ಕೆ ಸಾಕ್ಷಿಯಾಗಿ ನಾಡಿನ ಹಲವು ಕಡೆ ಅವರು ಸ್ಥಾಪಿಸಿದ ಶೈಕ್ಷಣಿಕ, ತಾಂತ್ರಿಕ, ವೈದ್ಯಕೀಯ, ಔದ್ಯೋಗಿಕ ಸಂಸ್ಥೆಗಳೇ ಸಾಕ್ಷಿ. ಶ್ರೀಕ್ಷೇತ್ರಕ್ಕೆ ಮೀಸಲಾಗಿದ್ದ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತರ ಕರ್ನಾಟಕದಾದ್ಯಂತ ವಿಸ್ತರಿಸಿದ್ದು ಅಭಿನಂದನಾರ್ಹ ಸಂಗತಿ. ಹೀಗೆ ದಿನದಿಂದ ದಿನಕ್ಕೆ ಸುಳಿ ತೆಗೆದು ಬೆಳೆಯುತ್ತಿರುವ ಸಂದರ್ಭದಲ್ಲಿ ಅವರ ಕುಟುಂಬ ವರ್ಗದ ಬಗ್ಗೆ ಬಂದ ಆಪಾದನೆಗಳು ಖೇದಕರ. ಹೆಗ್ಗಡೆಯವರು ಈ ಕುರಿತು ಎಲ್ಲ ಬಗೆಯ ತನಿಖೆಗಳಿಗೆ ಸ್ವತಃ ಆಗ್ರಹಿಸಿದ್ದಾರೆ.
ನ್ಯಾಯದ ಎದುರು ಎಲ್ಲರೂ ಸಮಾನರು ಎಂಬ ಮಾತನ್ನು ಅವರು ಹಲವು ಭಾರಿ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗದ ತನಿಖೆ ಮುಕ್ತಾಯವಾಗಿ ಸತ್ಯ ಹೊರಬರುವವರೆಗೆ ವೈಯಕ್ತಿಕ ಮತ್ತು ಶ್ರೀಕ್ಷೇತ್ರದ ಅವಹೇಳನ ಸಲ್ಲದು. ಸಮಾಜ ಮತ್ತು ಸರ್ಕಾರ ಶ್ರೀಕ್ಷೇತ್ರದ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement