ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳಿಗೆ ಕ್ರಿಯಾಶೀಲತೆ ಆವಶ್ಯಕ: ಶಾಸಕ ಪಾಟೀಲ

Mainashree
Updated On : 18 Oct 2013, 11:25 am

ಗಜೇಂದ್ರಗಡ: ವಿದ್ಯಾರ್ಥಿಗಳು ಪಠ್ಯದ ಜತೆ ಕ್ರಿಯಾಶೀಲತೆ ಮೈಗೂಡಿಸಿಕೊಂಡು ವಿದ್ಯೆ ಸಂಪಾದಿಸಿ ದೇಶದ ಸಮರ್ಥ ನಾಯಕರಾಗಿ ಹೊರಹೊಮ್ಮಿ ಸಮಾಜದ ಕೀರ್ತಿಗೆ ಪಾತ್ರರಾಗಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಈಚೆಗೆ ದೇವಾಂಗ ಸಂಘ ವತಿಯಿಂದ ನಡೆದ ಸಮಾರಂಭದಲ್ಲಿ ದೇವಾಂಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕ ಪ್ರಶಸ್ತಿ ವಿತರಿಸಿ ಮಾತನಾಡಿದರು. ಸಮಾಜ ಅಧ್ಯಕ್ಷ ನಿಂಗನಗೌಡ ಗಂಜಿ ಮಾತನಾಡಿದರು. ವೀರಣ್ಣ ಸೊನ್ನದ, ವ್ಹಿ.ಆರ್. ಗುಡಿಸಾಗರ, ಸುಜಾತಾ ಚುಂಚಾ, ವೀರಣ್ಣ ಶೆಟ್ಟರ, ಸುಬಾನಸಾಬ ಆರಗಿದ್ದಿ, ಶ್ರೀಧರ ಗಂಜಿಗೌಡ್ರ, ಮಹಾಬಳೇಶ ಹವಳದ, ಶ್ರೀಧರ ಬಿದರಳ್ಳಿ, ಕಾಶಿನಾಥ ಜುಜಾರೆ, ಬಸವರಾಜ ಸೂಡಿ, ಮುದಕಪ್ಪ ಬುಟ್ಟಾ, ಗೋಪಾಲ ಕೆಂಚಿ, ಮುರ್ತುಜಾ ಡಾಲಾಯತ್, ಗೋಪಾಲ ಲಾಳಿ, ವ್ಹಿ.ಬಿ. ಹಪ್ಪಳದ, ಎನ್.ವ್ಹಿ. ಚವ್ಹಾಣ, ಎಸ್.ಎನ್. ಕೊಪ್ಪರದ, ಪ್ರಕಾಶ ಗಂಜಿಗೌಡ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement