ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 18 Oct 2013, 11:25 am

21ರಂದು ವಿಶೇಷ ಸಭೆ
ಗದಗ: ಗದಗ ಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಕುರಿತು ಅ. 21 ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಭವನದಲ್ಲಿ ವಿಶೇಷ ಸಭೆ ಕರೆಯಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಗದಗ: 2013ನೇ ಶೈಕ್ಷಣಿಕ ಸಾಲಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ, ನವದೆಹಲಿ ಇವರು ಕಾಲೇಜು ಮತ್ತು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಲಿರುವ ಎಂ.ಎಚ್.ಆರ್.ಡಿ. ವಿದ್ಯಾರ್ಥಿ ವೇತನಕ್ಕೆ ಅರ್ಹ ಆಸಕ್ತ ವಿದ್ಯಾರ್ಥಿಗಳಿಂದ ಪಪೂ ಶಿಕ್ಷಣ ಇಲಾಖಾ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಲಾಖೆಗೆ ಅರ್ಜಿ ಸಲ್ಲಿಸಲು ಅ. 26ರ ವರೆಗೆ ವಿಸ್ತರಿಸಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‌ಸೈಟ್ ಢಿಢಿಢಿ.ಠ್ಡ್ಠಜ.್ಞಛ್ಠ.ಟ್ಝ್ಛಿ.್ಝಟಿ ಸಂಪರ್ಕಿಸಿ.
26ರಂದು ಜಿಲ್ಲಾಮಟ್ಟದ ಯುವಜನೋತ್ಸವ
ಗದಗ: 2013-14ನೇ ಸಾಲಿನ ಗದಗ ಜಿಲ್ಲಾಮಟ್ಟದ ಯುವಜನೋತ್ಸವವನ್ನು ಜಿಲ್ಲಾ ಆಡಳಿತ, ಜಿಪಂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರೇಶ್ವರ ಪುಣ್ಯಾಶ್ರಮ ಗದಗ ಹಾಗೂ ಯುವಜನ ಸಂಸ್ಥೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಅ. 26ರಂದು ಬೆಳಗ್ಗೆ 10.30 ಗಂಟೆಗೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಜಾನಪದ ನೃತ್ಯ, ಜಾನಪದ ಗೀತೆ, ಒನ್ ಆಕ್ಟ್ ಪ್ಲೇ (ಇಂಗ್ಲಿಷ್ ಅಥವಾ ಹಿಂದಿ), ಕ್ಲಾಸಿಕಲ್ ವೋಕಲ್ ಸೋಲೋ, (ಹಿಂದುಸ್ತಾನಿ ಮತ್ತು ಕರ್ನಾಟಕ) ಕ್ಲಾಸಿಕಲ್ ಇನ್ಸಟ್ರುಮೆಂಟಲ್ ಸೋಲೋ (ಸಿತಾರ್, ಫ್ಲೂಟ್, ತಬಲಾ, ವೀಣೆ, ಮೃದಂಗ) ಹಾರ್ಮೋನಿಯಂ, ಗಿಟಾರ್,  ಓಡಿಸ್ಸಾ, ಭರತನಾಟ್ಯಂ, ಕಥಕ್, ಮತ್ತು ಕೂಚಿಪುಡಿ ಮತ್ತು ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. 15 ರಿಂದ 35 ವರ್ಷದೊಳಗಿರುವ ಯುವಕ ಮತ್ತು ಯುವತಿಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳು ತಮಗೆ ಬೇಕಾಗುವಂತಹ ಪರಿಕರ, ಸಂಗೀತ ಸಾಮಗ್ರಿಗಳನ್ನು ತಾವೇ ತರಬೇಕು. ಆಸಕ್ತಿಯುಳ್ಳವರು ತಮ್ಮ ಪ್ರವೇಶ ಪತ್ರವನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಗದಗ ಇವರಿಗೆ ಅ. 23ರ ಸಂಜೆ 5.30ರ ಒಳಗಾಗಿ ತಲುಪುವಂತೆ ಕಳಿಸಲು ಕೋರಿದೆ. ಈ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರನ್ನು ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ನಿಯೋಜಿಸಲಾಗುವುದು ಎಂದು ಗದಗನ ಯುವಜನ ಸೇವಾ ಮತ್ತು  ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ಕಳವು
ನರಗುಂದ: ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಶಾಲೆ ನಂ. 2ರಲ್ಲಿ ಬುಧವಾರ ರಾತ್ರಿ ಶಾಲೆಯ ಕೊಠಡಿಯ ಕೀಲಿ ಮುರಿದು ಕಂಪ್ಯೂಟರ್ ಕಳವು ಮಾಡಲಾಗಿದೆ. ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಎಸ್.ಜಿ. ಮಣ್ಣೂರಮಠ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement