ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಚೆನ್ನಮ್ಮನ ಆದರ್ಶ ಅಳವಡಿಸಿಕೊಳ್ಳಿ: ಶ್ರೀ

Mainashree
Updated On : 19 Oct 2013, 11:16 am

ನರಗುಂದ: ಇಂದಿನ ಮಹಿಳೆಯರು ಕಿತ್ತೂರು ರಾಣಿ ಚೆನ್ನಮ್ಮಳ ಆದರ್ಶ ಅಳವಡಿಸಿಕೊಳ್ಳುವಂತೆ ಕೂಡಲ ಸಂಗಮದ ಪಂಚಮಸಾಲಿ ಜ. ಜಯಮೃತ್ಯುಂಜಯ ಶ್ರೀ ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಅ. 24ರಂದು ನಡೆಯುವ 190ನೇ ಕಿತ್ತೂರ ಚೆನ್ನಮ್ಮಳ ವಿಜಯೋತ್ಸವ ಆಚರಣೆ ಅಂಗವಾಗಿ ಜರುಗಿದ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವೀರರಾಣಿ ಕಿತ್ತೂರ ಚೆನ್ನಮ್ಮತಾಯಿ 1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಜಯಗಳಿಸಿ ವಿಜಯೋತ್ಸವ ಆಚರಿಸಿದ ಘಟನೆ ಅವಿಸ್ಮರಣೀಯವಾದದ್ದು. ನಮ್ಮ ದೇಶ ಆಂಗ್ಲರ ಗುಲಾಮಗಿರಿಯಲ್ಲಿರುವುದನ್ನು ಮೊದಲು ಪ್ರತಿಭಟಿಸಿ ಬ್ರಿಟಿಷ ಅಧಿಕಾರಿ ಥ್ಯಾಕ್ರೆಯ ರುಂಡ ಚಂಡಾಡಿ ವಿಜಯ ಶಾಲಿಯಾಗಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ವೀರ ಮಹಿಳೆ ಕಿತ್ತೂರು ಚೆನ್ನಮ್ಮಾಜಿ ಅವರ ಆದರ್ಶ ಇಂದಿನ ಯುವಪೀಳಿಗೆ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಪಂಚಮ ಸಾಲಿ ಸಮಾಜದ ತಾಲೂಕು ಅಧ್ಯಕ್ಷ ಡಾ. ಸಿ.ಕೆ. ಪಾಟೀಲವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಸವಗೌಡ ಪಾಟೀಲ, ರಂಗಪ್ಪ ತಿಗಡಿ, ಹನುಮಂತಗೌಡ ಪಾಟೀಲ, ವೈ.ಎಚ್. ಪಾಟೀಲ, ಎಲ್.ಎಂ.ಪಾಟೀಲ, ಎಸ್.ಬಿ. ಪಾಟೀಲ, ಈರಪ್ಪ ತಿಗಡಿ, ಪಕ್ಕೀರಗೌಡ ಹದ್ಲಿ, ಮಲ್ಲನಗೌಡ ಅಯ್ಯನಗೌಡ್ರ, ಶಿವಲಿಂಗನಗೌಡ ಪಾಟೀಲ, ವೈ.ಬಿ. ಪಾಟೀಲ, ಪ್ರೊ. ಆರ್.ಎಚ್. ತಿಗಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement