ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಮಾಯಣ ಗ್ರಂಥಕ್ಕೆ ಪೂಜನೀಯ ಸ್ಥಾನ

Mainashree
Updated On : 19 Oct 2013, 11:16 am

 ನರೇಗಲ್ಲ: ಮಹಾಕವಿ, ಋಷಿ, ಆದಿಕವಿ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಒಂದು ಆದಿ ಕಾವ್ಯ. ಈ ಕಾವ್ಯ ನಮ್ಮ ದೇಶದ ಸಂಸ್ಕೃತಿಯ ಮೇಲೆ ಗಾಢ ಪ್ರಭಾವ ಬೀರಿದೆ ಎಂದು ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಸಿ.ಜಿ. ಹುಡೇದಗಡ್ಡಿ ಹೇಳಿದರು.
ಅವರು ಸ್ಥಳೀಯ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ನಮ್ಮ ನಿತ್ಯ ಜೀವನದಲ್ಲಿ ಭಾಗವಾಗಿರುವ ರಾಮಾಯಣ ಇಂದಿಗೂ ಮಸುಕಾಗದೇ ನಮ್ಮ ಮಧ್ಯದಲ್ಲಿ ಬೆಳಗುತ್ತಿದೆ. ವಾಲ್ಮೀಕಿ ಅವರ ರಾಮಾಯಣ ಗ್ರಂಥವು ಇಂದಿಗೂ ಪೂಜನೀಯ ಸ್ಥಾನ ಹೊಂದುವ ಮೂಲಕ ಜನಮನದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಭೂಗೋಳ ಶಾಸ್ತ್ರದ ಮುಖ್ಯಸ್ಥ ಎಸ್.ಎಸ್. ಕಂಠಿ ಮಾತನಾಡಿದರು. ಪ್ರೊ. ಜಿ.ಜಿ. ಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ಕುಲಕರ್ಣಿ, ಎನ್.ಕೆ. ಬೇವಿನಕಟ್ಟಿ, ಕೆ.ಎಸ್. ಕಳಕೊಣ್ಣವರ, ಪ್ರಭು ವಕ್ಕಾರ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಪ್ರವೀಣ ಬಾಳೆಕಲ್ಲ ಸ್ವಾಗತಿಸಿದರು. ಮುತ್ತು ಬಳಗೋಡ ನಿರೂಪಿಸಿದರು. ಶರಣು ತಳವಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement