ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶೀಗೆ ಹುಣ್ಣಿಮೆ ಸಡಗರ

Mainashree
Updated On : 19 Oct 2013, 11:14 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 18
ರೈತರು ಭೂ ತಾಯಿಗೆ ವಿವಿಧ ಭಕ್ಷಗಳನ್ನು ನೈವೇದ್ಯ ಮಾಡಿ, ಚೆರಗ ಚೆಲ್ಲುತ್ತ ಶೀಗೆ ಹುಣ್ಣಿಮೆ ಹಬ್ಬವನ್ನು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶುಕ್ರವಾರ ಆಚರಣೆ ಮಾಡಿದರು. ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸುತ್ತಿರುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಹೊಲದಲ್ಲಿ ಪಾಂಡವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅವುಗಳಿಗೆ ಪೂಜೆ ಸಲ್ಲಿಸಿ ತಾವು ಮಾಡಿದ ಸಿಹಿ ಭಕ್ಷಗಳನ್ನು ನೈವೇದ್ಯ ಮಾಡಿ, ಹುಲ್ಲಿಲ್ಲೆಗ್ಯೋ ಸುರಂಬಳಿಗ್ಯೋ ಎನ್ನುತ್ತಾ ಭೂತಾಯಿಗೆ ಚೆರಗವನ್ನು ಚೆಲ್ಲುತ್ತಾ ಶೀಗೆ ಹುಣ್ಣಿಮೆ ಆಚರಣೆ ಮಾಡುವುದು ವಿಶೇಷ. ನಂತರ ಮನೆ ಮಂದಿಯೊಂದಿಗೆ ಬಂಧು ಮಿತ್ರರೊಡಗೂಡಿ ಎಲ್ಲರೂ ಸೇರಿ ಊಟ ಮಾಡುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement