ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಟಕ ನೈಜ ಜೀವನದ ಕೈಗನ್ನಡಿ

Mainashree
Updated On : 21 Oct 2013, 10:23 am

ಗಜೇಂದ್ರಗಡ: ನೈಜ ಜೀವನದ ಕೈಗನ್ನಡಿಯಾಗಿರುವ ನಾಟಕ ಕಲೆ ದೈನಂದಿನ ಬದುಕಿನ ಚಿತ್ರಣಕ್ಕೆ ಸಾಕ್ಷಿಯಾಗುವುದರ ಜತೆಗೆ ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆಗೆ ಮಾದರಿಯಾಗಿದೆ ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಪಿ. ಸುಬ್ರಹ್ಮಣ್ಯ ರೆಡ್ಡಿ ಹೇಳಿದರು.
ಅವರು ಸಮೀಪದ ಗೊಗೇರಿ ಗ್ರಾಮದ ತುಳಜಾಭವಾನಿ ದೇವಸ್ಥಾನದ ನೂತನ ರಥೋತ್ಸವದ ಅಂಗವಾಗಿ ಗ್ರಾಮದ ಯುವಕರಿಂದ ಬುಧವಾರ ಪ್ರದರ್ಶನಗೊಂಡ ತುಂಬಿದಮನೆ ಒಡೆದಮನೆ ನಾಟಕ ಉದ್ಘಾಟಿಸಿ ಮಾತನಾಡಿದರು.  
ಜನತೆ ಆಧುನಿಕತೆಗೆ ಮಾರು ಹೋಗಿ ಕೇವಲ ಚಲನಚಿತ್ರ, ಧಾರವಾಹಿಗಳತ್ತ ಆಕರ್ಷಿತರಾಗಿ ಮನಸ್ಸು, ನೆಮ್ಮದಿಯನ್ನು ವಿಕಾರಗೊಳಿಸುವಂತಹ ದಿಕ್ಕಿನೆಡೆಗೆ ಸಾಗುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದು ಜನಮಾನಸದಲ್ಲಿ ಶಾಶ್ವತವಾಗಿ ಬೇರೂರುವಂತಹ ದೇಶಿ ಸಂಸ್ಕೃತಿಯ ರಂಗ ಕಲೆಯನ್ನು ಆರಾಧಿಸುವಲ್ಲಿ ಮುಂದಾಗಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಮೂಲಿಮನಿ ಮಾತನಾಡಿ, ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ವಿಶೇಷ ಯೋಜನೆಗಳನ್ನು ರೂಪಿಸಿ ತೆರೆಯ ಹಿಂದೆ ಸರಿಯುತ್ತಿರುವ ರಂಗ ಕಲೆ ಉಳಿಸಿ ಯುವ ಜನಾಂಗದ ಮನ ಮುಟ್ಟುವಂತೆ ಮಾಡುವ ಮಹತ್ತರ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದರು.
ಕಳಕಯ್ಯ ಹಿರೇಮಠ ಸಾನ್ನಿಧ್ಯವಹಿಸಿದ್ದರು. ಮರಾಠ ಸಮಾಜದ ಅಧ್ಯಕ್ಷೆ ಹೇಮಾವತಿ ಭೊಸಲೆ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಶ್ರೀಕಾಂತ ಅವಧೂತ, ಮರ್ತುಜಾ ಢಾಲಾಯತ, ಹನುಮಪ್ಪ ಹೊರಪೇಟಿ, ಇಮಾಮಸಾಬ್ ಬಾಗವಾನ, ಕೆ.ಕೆ. ಭಾಗವಾನ, ಬಸನಗೌಡ ಪಾಟೀಲ, ಮಹಾದೇವಪ್ಪ ಗುಂಡೆ, ರಾಜೇಶ ಗಾರಗಿ, ಮಲ್ಲೇಶ ಭೋಸಲೆ, ಆರ್.ಕೆ. ಭಾಗವಾನ, ವಸಂತ ಗಾರಗಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement