ಪ್ರತಿಭಟನೆಗೆ ಕದಳಿ ಮಹಿಳಾ ವೇದಿಕೆ ಬೆಂಬಲ
ಗದಗ: ಸಿದ್ಧರಾಮ ಚರಿತ್ರೆ ಕೃತಿ ವಿರುದ್ಧ ಅ. 21ರಂದು ಗದುಗಿನಲ್ಲಿ ನಡೆಯಲಿರುವ ಸಾತ್ವಿಕ ಪ್ರತಿಭಟನೆಗೆ ಗದಗ ತಾಲೂಕು ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು ಬೆಂಬಲಿಸಿದ್ದಾರೆ. ಭಾನುವಾರ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳನ್ನು ಭೇಟಿಯಾಗಿ ಚರ್ಚಿಸಿ ಅಂದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಾಗಿ ನಿರ್ಧರಿಸಿದರು. ಗದಗ ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕವಿತಾ ದಂಡಿನ, ಕಾರ್ಯದರ್ಶಿ ಶ್ರೀದೇವಿ ಪಾಟೀಲ, ಖಜಾಂಚಿ ಅನ್ನಪೂರ್ಣಾ ವರವಿ, ಲಲಿತಾ ಇಂಗಳಳ್ಳಿ, ಶೋಭಾ ಪೊಲೀಸ್ಪಾಟೀಲ, ವಿದ್ಯಾ ಸೂಡಿಶೆಟ್ಟರ್, ಶಾಂತಾ ಮುಂದಿನಮನಿ ಮುಂತಾದವರು ಉಪಸ್ಥಿತರಿದ್ದರು.