ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಾಲ್ಮೀಕಿ ಆದರ್ಶಗಳು ಸಾರ್ವಕಾಲಿಕ: ಆರ್.ಎಸ್. ಗುಜ್ಜಲ

Mainashree
Updated On : 21 Oct 2013, 10:23 am

ಕನ್ನಡಪ್ರಭ ವಾರ್ತೆ, ಗದಗ, ಅ. 20
ಭರತ ಖಂಡಕ್ಕೆ ರಾಮಾಯಣದಂತಹ ಬಹುದೊಡ್ಡ ಕೃತಿಯನ್ನು ನೀಡಿ ಮನುಕುಲಕ್ಕೆ ಜ್ಞಾನದ ಬೆಳಕು ತೋರಿ ಸನ್ಮಾರ್ಗದತ್ತ ನಡೆಯುವಂತೆ ಮಾಡಿರುವ ಮಹರ್ಷಿ ವಾಲ್ಮೀಕಿ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಶಿಕ್ಷಕ ಸಂಘದ ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಎಸ್. ಗುಜ್ಜಲ ಹೇಳಿದರು.
ಅವರು ಶುಕ್ರವಾರ ನಗರದಲ್ಲಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಾಖೆಯಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
19 ಸಾವಿರಾರು ವರ್ಷಗಳ ಹಿಂದೆ ರತ್ನಾಕರ ಎಂಬ ವ್ಯಕ್ತಿ ಕಾಡು ಮೇಡುಗಳಲ್ಲಿ ಸಂಚರಿಸುತ್ತಾ ವಾಮಮಾರ್ಗದ ಮೂಲಕ ತಮ್ಮ ಬದುಕನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ಸತ್ಪುರುಷರ ಸಂಪರ್ಕದಿಂದ ಬದಲಾವಣೆಗೊಂಡು ಮನಪರಿವರ್ತನೆಯಾಗಿ ಒಬ್ಬ ಮಹಾನ್ ಕವಿಯಾಗಿ ಹೊರಹೊಮ್ಮಿದ ವಾಲ್ಮೀಕಿ ಅವರ ಆದರ್ಶಗಳು ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿ, ಶೋಷಿತವರ್ಗ ಶ್ರೇಣಿಕೃತ ವ್ಯವಸ್ಥೆಯಿಂದ ಹೊರ ಬಂದು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ತಿಳಿಸಿದರು.
ಚಂದ್ರಶೇಖರ ಮೇಲಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಉಣ್ಣಿಮಠ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಚಾಲಕ ಮಾರುತಿ ಗುಡಿಮನಿ, ದಲಿತ ಸಂಘಟನಾ ಸಮಿತಿಯ ನಾಯಕ ಸತೀಶ ಹೂಲಿ, ಪರಶುರಾಮ ಪೂಜಾರ, ವಿಶ್ವನಾಥ ದೊಡ್ಡಮನಿ, ಗಣೇಶ ಹುಬ್ಬಳ್ಳಿ, ರವಿ ಹಾದಿಮನಿ, ರಾಷ್ಟ್ರೀನ ಜೊಸೆಫ್, ಮರಿಯಪ್ಪ ಮುಂತಾದವರು ಇದ್ದರು. ವಿನಾಯಕ ಬಳ್ಳಾರಿ ನಿರೂಪಿಸಿದರು. ಯುವರಾಜ ಬಳ್ಳಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement