ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 21 Oct 2013, 10:22 am

ಅಹವಾಲು ಸ್ವೀಕಾರ
ಗದಗ: ಕರ್ನಾಟಕ ಲೋಕಾಯುಕ್ತ ಗದಗ ಘಟಕದ ಆರಕ್ಷಕ ಉಪಾಧೀಕ್ಷಕ ಕೆ.ಸಿ. ಅಸುಂಡಿ ಅವರು ಅ. 25ರಂದು ಶಿರಹಟ್ಟಿಯ ಬೇಂದ್ರೆ ಭವನದಲ್ಲಿ, 26ರಂದು ಮುಂಡರಗಿಯ ತಾಲೂಕು ಪಂಚಾಯತಿ ಸಭಾಭವನದಲ್ಲಿ, 28ರಂದು ನರಗುಂದ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಹಾಗೂ 29ರಂದು ರೋಣ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯಾ ದಿನಗಳಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಸಾರ್ವಜನಿಕರ ದೂರು ಹಾಗೂ ಕುಂದುಕೊರತೆಗಳ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಗದಗ ಕರ್ನಾಟಕ ಲೋಕಾಯುಕ್ತ ಕಚೇರಿ ಪ್ರಕಟಣೆ ತಿಳಿಸಿದೆ.
ಇಂದು ಸಮಾರೋಪ ಸಮಾರಂಭ
ಗಜೇಂದ್ರಗಡ: ಸ್ಥಳೀಯ ಕನಕದಾಸ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ವತಿಯಿಂದ ಅ. 21ರ ಸೋಮವಾರ ಬೆಳಗ್ಗೆ 11ಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಡಿ ದತ್ತು ಗ್ರಾಮ ಪುರ್ತಗೇರಿಯಲ್ಲಿ ನಡೆಯುತ್ತಿರುವ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಲಿದೆ. ಪ್ರಾಚಾರ್ಯ ಎಚ್.ಎನ್. ಗೌಡರ ಅಧ್ಯಕ್ಷತೆ ವಹಿಸುವರು. ಎಲ್.ಕೆ.  ಹಿರೇಮಠ, ಎಂ.ಎಂ. ಕೆಲೂರ, ಎಸ್.ಬಿ. ಅವಾರಿ, ಐ.ಬಿ. ದಂಡಿನ, ಐ.ಪಿ. ಹಾಲಿನವರ, ಕೆ.ಡಿ. ಮಾದರ, ಸಂಗಯ್ಯ ಪತ್ರಿಗಿಡದ, ಮಲ್ಲಪ್ಪ ಹಡಪದ, ಬಸವರಾಜ ಹಡಪದ, ಎಂ.ಎಂ. ಮುನಸಿ, ಯಮನೂರಪ್ಪ ಹರಿಜನ, ಬಸಪ್ಪ ಮುಶೀಗೇರಿ, ಪರಸಪ್ಪ ವಾರಿಕಲ್, ಕರಿಯಪ್ಪ ಹರಿಜನ, ವೈ.ಎಂ. ಭೂವಿ, ಎ.ಆರ್. ಚಿಟಗಿ ಮುಂತಾದವರು ಪಾಲ್ಗೊಳ್ಳುವರು ಎಂದು ಯೋಜನಾಧಿಕಾರಿ ಉಮೇಶ ಮಲ್ಲಾಪುರ ತಿಳಿಸಿದ್ದಾರೆ.
ಎನ್ನೆಸ್ಸೆಸ್‌ದಿಂದ ರಾಷ್ಟ್ರಪ್ರೇಮ
ಗದಗ: ಗಾಂಧೀಜಿಯವರ ಆಶಯಗಳ ಸಾಕಾರ ರೂಪವಾದ ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆ, ದೇಶಪ್ರೇಮ, ಸೇವಾ ಮನೋಭಾವನೆ, ಕಷ್ಟ ಸಹಿಷ್ಣುತೆ, ಧಾರ್ಮಿಕ ಸಾಮರಸ್ಯ ಮುಂತಾದ ಮೌಲ್ಯಗಳನ್ನು ಬಿತ್ತಿ ಬೆಳೆಯುತ್ತದೆ ಎಂದು ಸುಜಾತಾ ದೊಡ್ಡಮನಿ ಹೇಳಿದರು.ಸ್ಥಳೀಯ ಸರ್ಕಾರಿ ಪಪೂ ಕಾಲೇಜಿನ ಎನ್.ಎಸ್.ಎಸ್. ಘಟಕ ಹಮ್ಮಿಕೊಂಡಿದ್ದ 7 ದಿನಗಳ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಬಿ.ಜಿ. ಗಿರಿತಿಮ್ಮಣ್ಣವರ ಮಾತನಾಡಿ, ಈ ಶಿಬಿರದಲ್ಲಿ ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರಯತ್ನ ಮಾಡಬೇಕು. ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗುವ ರೀತಿಯಲ್ಲಿ ನಿಮ್ಮ ವರ್ತನೆ ಇರಬೇಕು ಎಂದರು. ಪ್ರಾ. ಚಂದ್ರಶೇಖರ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ಬಸವರಾಜೇಶ್ವರಿ ಪಾಟೀಲ ಹಾಗೂ ಸಂಗಡಿಗರು ಎನ್.ಎಸ್.ಎಸ್. ಗೀತೆ ಪ್ರಸ್ತುತ ಪಡಿಸಿದರು. ಶಿಬಿರಾಧಿಕಾರಿ ಬಿ.ವಿ. ಸಜ್ಜನರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿ ಆನಂದ ದೇಸಾಯಿಶಟ್ಟಿ, ಪ್ರಗತಿ ಪಾಟೀಲ, ಕೃಷ್ಣ ಲಮಾಣಿ, ಭರತ ಮಾರೆಪ್ಪನವರ, ಬಸವರಾಜ ವಡ್ಡಟ್ಟಿ ಹಾಗೂ ಯೋಗೇಶ ಜಿತೂರಿ ಮುಂತಾದವರು ಉಪಸ್ಥಿತರಿದ್ದರು. ಸಹನಾ ಪಿಳ್ಳೆ ನಿರೂಪಿಸಿದರು. ಸಹಶಿಬಿರಾಧಿಕಾರಿ ಕೆ.ಎಸ್. ಗಂಗನಗೌಡ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement