ಕೊಲೆ: ನ್ಯಾಯವಾದಿಗಳಿಂದ ಕಲಾಪ ಬಹಿಷ್ಕಾರ
ಗದಗ: ರಾಯಭಾಗದ ಯುವ ನ್ಯಾಯವಾದಿ ಸುಕುಮಾರ ಕಾಂಬಳೆ ಅವರ ಬರ್ಬರ ಹತ್ಯೆ ಖಂಡಿಸಿ ಸೋಮವಾರ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಲಾಪ ಬಹಿಷ್ಕರಿಸಿದರು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಮತ್ತು ಸರ್ಕಾರಕ್ಕೆ ಒತ್ತಾಯಿಸಲು ಖಂಡನಾ ನಿರ್ಣಯ ತೆಗೆದುಕೊಳ್ಳಲಾಯಿತು ಮತ್ತು ಕವಿ ರಾಘವಾಂಕ ವಿರಚಿತ ಸಿದ್ಧರಾಮ ಚರಿತ ಕೃತಿ ವಿಕೃತಗೊಳಿಸಿದ್ದನ್ನು ಖಂಡಿಸಿ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿತು. ಈ ಸಂದರ್ಭ ನ್ಯಾಯವಾದಿ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ, ಉಪಾಧ್ಯಕ್ಷೆ ಕಲ್ಪನಾ ಮಾನ್ವಿ, ಕಾರ್ಯದರ್ಶಿ ಕೆ.ಎಲ್. ಕರಿಗೌಡ್ರ, ಎಂ.ಎ. ಸಂಗನಾಳ, ಆರ್.ಪಿ. ಪಾಲನಕರ, ಬಿ.ಎಚ್. ಮಾಡಲಗೇರಿ ಎನ್.ಎಸ್. ಜಾಲವಾಡಗಿ, ವಿ.ವೈ. ಹಬೀಬ, ಪಿ.ಬಿ. ಸಜ್ಜನ, ವಸಂತ ಮೇಟಿ, ಎಸ್.ವೈ. ಕಲ್ಲಾಪುರ, ರಾಜೀವ ವಡ್ರಾಳಿ, ಡಿ.ಎಂ.ನದಾಫ್, ಎಂ.ಎಂ. ಮೌಲ್ವಿ, ಎಸ್.ಆರ್. ಗೊಂಡಬಾಳ ಮತ್ತು ಎಂ.ಎ. ಪಣಿಬಂದ, ಡಿ.ಆರ್. ಕೊಂಕ್ರಿ ಇನ್ನೂ ಹಲವಾರು ನ್ಯಾಯವಾದಿಗಳು ಉಪಸ್ಥಿತರಿದ್ದರು.