ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧಾರ್ಮಿಕ ಚಿಂತನೆ ಅವಶ್ಯ: ಶ್ರೀ

Lingaraj Badiger
Updated On : 22 Oct 2013, 11:00 am

ಲಕ್ಷ್ಮೇಶ್ವರ: ಧರ್ಮ ಧರ್ಮಗಳ ನಡುವಿನ ಸಂಘರ್ಷ ಮಾನವೀಯ ಮೌಲ್ಯ ಹಾಗೂ ಸಂಬಂಧಗಳು ಸಡಿಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಶರಣರ, ಮಹಾನುಭಾವರ ಆದರ್ಶ ಮತ್ತು ವಿಚಾರಧಾರೆಗಳು ಬೆಳಕು ತೋರಬಲ್ಲವು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜ. ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಸಮೀಪದ ಮುಕ್ತಿಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಲಿಂ. ರಂಭಾಪುರಿ ಜ. ವೀರಗಂಗಾಧರ ಶ್ರೀಗಳ 21ನೇ ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.ಜಗತ್ತಿನ ಎಲ್ಲ ಧರ್ಮಗಳು ಸಮಾನವೆಂದು ನುಡಿದ ಕೀರ್ತಿ ಗಂಗಾಧರ ಶ್ರೀಗಳ ವ್ಯಕ್ತಿತ್ವಕ್ಕೆ ಸಾಮಾಜಿಕ ಹಾಗೂ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ. ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಆದರ್ಶ ಮೌಲ್ಯಗಳನ್ನು ಬೆಳೆಸಲೆಂದು  ವೀರಗಂಗಾಧರ ಶ್ರೀಗಳು ಜನ್ಮತಾಳಿ ಬಂದವರಾಗಿದ್ದರು. ಶಾಂತಿ ಸಮಾಧಾನ ಪಡೆದುಕೊಳ್ಳಲು ಧರ್ಮ ಹಾಗೂ ಧಾರ್ಮಿಕ ಚಿಂತನೆ ಅವಶ್ಯವಾಗಿದೆ. ಮುಕ್ತಿ ಮಂದಿರದಲ್ಲಿ ತ್ರಿಕೋಟಿಲಿಂಗ ಸ್ಥಾಪನೆ ಮಾಡಬೇಕು ಎನ್ನುವ ಮಹದಾಸೆಯನ್ನು ಶ್ರೀಗಳು ಇಟ್ಟುಕೊಂಡಿದ್ದರು. ಅದನ್ನು ವರ್ಷದೊಳಗೆ ಪೂರ್ಣಗೊಳಿಸಲು ರಂಭಾಪುರಿ ಪೀಠವು ಉತ್ಸುಕವಾಗಿದೆ. ಶ್ರೀಗಳ ಹಾಗೂ ಭಕ್ತರ ಆಶಯದಂತೆ ಈ ಕ್ಷೇತ್ರ ಮುಂದೆ ಐತಿಹಾಸಿಕ ಕ್ಷೇತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸಮಾಜದ ವಿವಿಧ ಸ್ತರಗಳನ್ನು ಬೆಳೆಸುವಲ್ಲಿ ರಂಭಾಪುರಿ ಪೀಠದ ಶ್ರೀಗಳ ಕಾರ್ಯ ಮಹತ್ತರವಾಗಿದೆ. ಮುಕ್ತಿ ಮಂದಿರವನ್ನು ಧರ್ಮಕ್ಷೇತ್ರವನ್ನಾಗಿ ಬೆಳೆಸಲು ಶ್ರೀಗಳು ಸಾಕಷ್ಟು ಶ್ರಮವಹಿಸಿದ್ದರು ಎಂದರು. ಕಲಾದಗಿಯ ಶ್ರೀಗಳು, ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಟಿ. ಈಶ್ವರ, ಮುಕ್ತಿಮಂದಿರ ಧರ್ಮಕ್ಷೇತ್ರದ ಧರ್ಮಾಧಿಕಾರಿ ವಿಮಲರೇಣುಕ ಶ್ರೀಗಳು. ಕುಂದಗೋಳದ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಮಾತನಾಡಿದರು. ಹೂಲಿಯ ಸಾಂಭಯ್ಯಸ್ವಾಮಿಮಠದ ಉಮೇಶ್ವರ ಶ್ರೀಗಳು, ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಎಸ್.ಪಿ. ಪಾಟೀಲ, ಯು.ಎನ್. ಹೊಳಲಾಪುರ, ಬಸಣ್ಣ ಮಲ್ಲಾಡದ, ಕುಬೇರಪ್ಪ ಮಹಾಂತಶೆಟ್ಟರ, ಜಿಪಂ ಸದಸ್ಯ ವೆಂಕನಗೌಡ್ರ ಹಿರೇಗೌಡ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement