ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೇಕಾರ ಕಲ್ಯಾಣಕ್ಕೆ ಸರ್ಕಾರ ಬದ್ಧ

Lingaraj Badiger
Updated On : 22 Oct 2013, 11:09 am

ಗಜೇಂದ್ರಗಡ: ನೇಕಾರಿಕೆಯನ್ನೆ ನಂಬಿ ಬದುಕು ಸಾಗಿಸುತ್ತಿರುವ ಅತ್ಯಂತ ಹಿಂದುಳಿದ ದೇವಾಂಗ ಸಮುದಾಯದ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸ್ಥಳೀಯ ಗಂಜಿಪೇಟೆ ಬಳಿ ನಡೆದ ಸಮಾರಂಭದಲ್ಲಿ  ದೇವಾಂಗ ಸಂಘ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಲಾಳಿ-ಮೇಟಿ ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವುದು ರೈತನ ಕಾಯಕವಾದರೆ ಮಾನ ಮುಚ್ಚುವ ಕಾಯಕ ನೇಕಾರನದ್ದು. ಆದರೆ, ಇಂದು ನೇಕಾರರ ಸ್ಥಿತಿ ದುಸ್ಥರವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಶಿಕ್ಷಣ. ನೇಕಾರ ಬಂಧುಗಳು ವೃತ್ತಿ ಜತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾವಂತರನ್ನಾಗಿಸಿ ಬಡತನದ ಪೆಡಂಭೂತ ತೊಲಗಿಸಬೇಕು ಎಂದರು.  
ಕೇವಲ ನೇಕಾರಿಕೆ ನಂಬಿ ಬದುಕು ಸಾಗಿಸುತ್ತಿರುವ ದೇವಾಂಗ ಸಮಾಜ ಬಾಂಧವರಲ್ಲಿ ಸಂಘಟನೆ ಕೊರತೆಯಿದೆ. ಈ ನಿಟ್ಟಿನಲ್ಲಿ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಯೋಜನೆ ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬನ್ನಿ ಎಂದರು.
ಇದೇ ಸಂದರ್ಭ ದೇವಾಂಗ ಸಂಘ ಅಧ್ಯಕ್ಷ ನಿಂಗನಗೌಡ ಗಂಜಿ, ಶಾಸಕರಿಗೆ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರದಿಂದ ರು. 1 ಕೋಟಿ ಅನುದಾನ ಮಂಜೂರು ಮಾಡಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು. ನೇಕಾರ ಸಮುದಾಯ ಮುಖಂಡ ವೀರಣ್ಣ ಸೊನ್ನದ, ಶ್ರೀಧರ ಬಿದರಳ್ಳಿ, ಕಾಶಿನಾಥ ಜುಜಾರೆ, ಶ್ರೀಧರ ಗಂಜಿಗೌಡ್ರ, ಬಸವರಾಜ ಸೂಡಿ, ಸುರೇಶ ಲಾಳಿ, ಮುದಕಪ್ಪ ಬುಟ್ಟಾ, ಗೋಪಾಲ ಕೆಂಚಿ, ಕೊಟ್ರೇಶ ಚಿಲಕಾ, ಗೋಪಾಲ ಲಾಳಿ, ಪ್ರಭು ಶಲ್ಲೇದ, ಎನ್.ವಿ. ಚವ್ಹಾಣ, ಪರ್ವತಪ್ಪ ಎಂಜಿನಿ, ಎಸ್.ಎನ್. ಮ್ಯಾಕಲ, ಎಸ್.ಎನ್. ಕೊಪ್ಪರದ, ಪ್ರಕಾಶ ಗಂಜಿಗೌಡ್ರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement