ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೆಲಸ ಮಾಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ: ಯಾವಗಲ್

Lingaraj Badiger
Updated On : 23 Oct 2013, 10:54 am

ನರಗುಂದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗ್ರಾಮೀಣ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಂದರೂ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಕೆಲಸ ಮಾಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಬಿ.ಆರ್. ಯಾವಗಲ್ಲ ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನರಗುಂದ ವಿಧಾನಸಭೆ ವ್ಯಾಪ್ತಿಯ ನರಗುಂದ, ರೋಣ, ಗದಗ ತಾಲೂಕುಗಳ ಗ್ರಾಪಂ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಡವಿಸೋಮಾಪುರ ಗ್ರಾಮದ ಎಲ್ಲ ನೀರು ಹರಿಜನ ಕೆರೆಯಲ್ಲಿ ಹೋಗಿ ನಿಲ್ಲವುದರ ಬಗ್ಗೆ ಸಾಕಷ್ಟು ಬಾರಿ ತಿಳಿಸಲಾಗಿದೆ. ಆದರೂ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು ಕುಂಟ ನೆಪ ಹೇಳುವುದನ್ನು ರೂಢಿಸಿಕೊಂಡಿದ್ದು, ಅದನ್ನು ತಕ್ಷಣವೇ ಕೈ ಬಿಡಬೇಕು, ಗ್ರಾಮಗಳಲ್ಲಿ ಚರಂಡಿ, ಕುಡಿವ ನೀರು, ರಸ್ತೆ, ಕೆರೆ ನಿರ್ಮಾಣ, ಹೊಲಗಳಿಗೆ ಹೋಗುವ ರಸ್ತೆ, ಸ್ವಚ್ಛತೆ, ಬದು ನಿರ್ಮಾಣ, ವಸತಿ ಮನೆಗಳು, ಶೌಚಾಲಯ ಇವುಗಳು ಬಗ್ಗೆ ಹೆಚ್ಚು ಗಮನ ನೀಡಬೇಕು. ಈ ವರ್ಷದ ಗುರಿಯಲ್ಲಿ ಶೇ. 50ರಷ್ಟು ಮುಗಿಸಲು ನವೆಂಬರ್ 22 ರೊಳಗೆ ಎಲ್ಲ ಗ್ರಾಪಂ ಅಧಿಕಾರಿಗಳು ಮುಂದಾಗಬೇಕು ಎಂದರು. ಜಿಪಂ ಸಿಇಒ ವೀರಣ್ಣ ತುರಮರಿ ಮಾತನಾಡಿ, ಅಧಿಕಾರಿಗಳಿಗೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿ, ಕೆಲ ಸಲಹೆ ಸೂಚನೆಗಳನ್ನು ನೀಡಿಸಿದರು.  ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಉಪಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ, ಜಿಪಂ ಯೋಜನಾ ನಿರ್ದೇಶಕ ಟಿ.ದಿನೇಶ, ತಾಪಂ ಅಧಿಕಾರಿ ಎನ್.ಆರ್. ಗುಂಡಾ, ಗದಗ ತಾಪಂ ಅಧಿಕಾರಿ ಬಿ.ರೇವಣ್ಣ, ರೋಣ ತಾಪಂ ಅಧಿಕಾರಿ ಎಂ.ಎಸ್. ಪಿಡಶೆಟ್ಟಿ, ರಾಜು ಕಲಾಲ, ಗುರುಪಾದಪ್ಪ ಕುರಹಟ್ಟಿ, ಜಗದೇಶ ರಾಯನಗೌಡ್ರ, ಶಿವನಗೌಡ ಹೆಬ್ಬಳ್ಳಿ ಮುಂತಾದವರು ಹಾಜರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement