ದೇಶಕ್ಕೆ ಪ್ರಬಲ ನಾಯಕತ್ವ ಅವಶ್ಯ
ಗದಗ: ಯುಪಿಎ ಸರ್ಕಾರದ 9 ವರ್ಷಗಳ ಆಡಳಿತದಿಂದ ದೇಶದ ಪರಿಸ್ಥಿತಿ ಹದಗೆಟ್ಟಿದ್ದು, ಉಜ್ವಲ ಭವಿಷ್ಯಕ್ಕೆ ನರೇಂದ್ರ ಮೋದಿಯಂತಹ ಪ್ರಬಲ ನಾಯಕತ್ವದ ಅವಶ್ಯಕತೆಯಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ ಹೇಳಿದರು. ಅವರು ಸೋಮವಾರ ನಗರದ ವಿಠ್ಠಲರೂಢ ಮಠದಲ್ಲಿ ನಡೆದ ಗದಗ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದರು. ಕಲ್ಲಿದ್ದಲು, 2ಜಿ ಹಗರಣ ಸೇರಿದಂತೆ ಅನೇಕ ಹಗರಣಗಳಲ್ಲಿ ಕೇಂದ್ರ ಸರ್ಕಾರ ಮುಳುಗಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಕಿಡಿಕಾರಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ದೇಶದ ಯುವಜನತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ತೀರ್ಮಾನಿಸಿದ್ದಾರೆ ಎಂದರು. ಛಗನ್‌ರಾಜ ಪುರೋಹಿತ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹೀರೇಮಠ ಮಾತನಾಡಿ, ಭವ್ಯ ಭಾರತ ನಿರ್ಮಾಣ ಮಾಡಲು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಕರೆ ನೀಡಿದರು. ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಿಂಗನಗೌಡ ಹರ್ತಿ, ನಾಗರಾಜ ಚಿತ್ರಗಾರ, ಜಿಲ್ಲಾ ಉಪಾಧ್ಯಾಕ್ಷ ಗಂಗಾಧರ ಹಬೀಬ, ಶೇಖರ ಕಿರೇಸೂರ, ವಿನಾಯಕ ಹಬೀಬ, ಸಂತೋಷ ಕಬಾಡರ, ಸುಧೀರ ಕಾಟೀಗರ, ಪ್ರೀತಂ ಹೀರೇಮಠ, ಅಜಯ ಮುನವಳ್ಳಿ, ಸಿದ್ಧರಾಮೇಶ ಹಿರೇಮಠ, ದೇವಪ್ಪ ಇಟಗಿ, ಎಚ್.ಎಲ್. ಬಾಲರೆಡ್ಡಿ, ಪ್ರಭು ಕರಮಡಿ, ಪರಶುರಾಮ ಚಿಲಜೇರಿ, ಸುರೇಶ ಚಿತ್ರಗಾರ, ಜಗದೀಶ ಹಾರೋಗೇರಿ, ಬಾಪುಗೌಡ ದೇಸಾಯಿ, ಮುದಿಯಪ್ಪ ದಾನಿ, ಗುರು ವಾಲಿ, ವಸಂತ ಗಂಗರ್, ಮಹೇಶ ಶಿರಹಟ್ಟಿ, ಸುಭಾಸ ಸುಂಕದ ಉಪಸ್ಥಿತರಿದ್ದರು. ಸುಧೀರ ಕಾಟಿಗರ ಸ್ವಾಗತಿಸಿದರು. ಲಿಂಗನಗೌಡ ಹರ್ತಿ ನಿರೂಪಿಸಿದರು. ನಾಗರಾಜ ಚಿತ್ರಗಾರ ವಂದಿಸಿದರು.