ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಾಹನ ಕಂದಕಕ್ಕೆ ಉರುಳಿ 11 ಕಾರ್ಮಿಕರಿಗೆ ಗಾಯ

Lingaraj Badiger
Updated On : 23 Oct 2013, 11:02 am

ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ರಸ್ತೆಯ ಸರ್ಕಾರಿ ಪಪೂ ಕಾಲೇಜು ಹತ್ತಿರ ಟಾಟಾ ಮ್ಯಾಜಿಕ್ ವಾಹನ ಕಂದಕಕ್ಕೆ ಉರುಳಿಬಿದ್ದು 11 ಕಾರ್ಮಿಕರು ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಪಟ್ಟಣದ ಸೋಮೇಶ್ವರ ಸ್ಪಿನಿಂಗ್ ಮಿಲ್‌ನ ಮಹಿಳಾ ಕಾರ್ಮಿಕರು ತಮ್ಮ ನಿತ್ಯದ ಕೆಲಸ ಮುಗಿಸಿಕೊಂಡು ಟಾಟಾ ಮ್ಯಾಜಿಕ್ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಅದರಲ್ಲಿದ್ದ ಎಲ್ಲ ಮಹಿಳಾ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರೆಲ್ಲರೂ ಶಿಗ್ಲಿ ಗ್ರಾಮದವರಾಗಿದ್ದು, ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ವಿಕಾಸ ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದಿಂದ ಕೇವಲ 1 ಕಿ.ಮೀ. ಅಂತರದಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆದು ಸುಮಾರು 1 ಗಂಟೆ ಕಳೆದರೂ ಸ್ಥಳಕ್ಕೆ 108 ಮತ್ತು
ತುರ್ತುಚಿಕಿತ್ಸಾ ವಾಹನ ದೊರಕದೆ ಗಾಯಾಳುಗಳು ಪರದಾಡುವಂತಾಗಿತ್ತು. ಈ ಬಗ್ಗೆ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಎರಡೂ ವಾಹನಗಳು ದುರಸ್ತಿಯಲ್ಲಿವೆ ಎಂದು ತಿಳಿದುಬಂದಿತು. ಈ ಕುರಿತು ಗಾಯಾಳುಗಳ ಸಂಬಂಧಿಗಳು ಅಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಘಟಕಕ್ಕೆ ಆಯ್ಕೆ
ಗದಗ: ಜಿಲ್ಲಾ ಜಿಜೆಪಿ ಕಾರ್ಯದರ್ಶಿಯಾಗಿ ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಮುಡಿಯಪ್ಪ ಶಿಂಗ್ಟಾಲಕೇರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement