ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

27ರಂದು ಚನ್ನಮ್ಮ ವಿಜಯೋತ್ಸವ

Lingaraj Badiger
Updated On : 24 Oct 2013, 10:56 am

 ಕನ್ನಡಪ್ರಭ ವಾರ್ತೆ, ಗದಗ, ಅ. 23
ವೀರರಾಣಿ ಕಿತ್ತೂರ ಚನ್ನಮ್ಮಳ 190ನೇ ವಿಜಯೋತ್ಸವವನ್ನು ಅ. 27ರಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಅದ್ಧೂರಿಯಾಗಿ ಆಚರಿಸಲು ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ಗಣ್ಯರು ನಿರ್ಧರಿಸಿದ್ದಾರೆ ಎಂದು ಅಖಿಲ ಕರ್ನಾಟಕ ವೀರರಾಣಿ ಕಿತ್ತೂರ ಚನ್ನಮ್ಮಳ ಸರ್ವಧರ್ಮ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ದೇಸಾಯಿ ಹೇಳಿದರು. ಅವರು ನಗರದ ವೀರರಾಣಿ ಕಿತ್ತೂರ ಚನ್ನಮ್ಮಳ ಉದ್ಯಾನವನದಲ್ಲಿ ಈಚೆಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಮೊದಲು ನಿರ್ಧರಿಸಿದಂತೆ ಅ. 27ರ ಬೆಳಗ್ಗೆ 8ಕ್ಕೆ ನಗರದ ವೀರರಾಣಿ ಕಿತ್ತೂರ ಚನ್ನಮ್ಮಳ ಬೃಹತ್ ಕಂಚಿನ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಅನೇಕ ಕಲಾತಂಡಗಳ ಮೂಲಕ ಬೃಹತ್ ಮೆರವಣಿಗೆಯು ವೀರೇಶ್ವರ ಪುಣ್ಯಾಶ್ರಮವನ್ನು ತಲುಪಿ ಸಂಜೆ 4 ಗಂಟೆಗೆ ವಿಜಯೋತ್ಸವ ಕಾರ್ಯಕ್ರಮ ಏರ್ಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೀರರಾಣಿ ಕಿತ್ತೂರ ಚನ್ನಮ್ಮಳ ವಿಜಯೋತ್ಸವವನ್ನು ಪ್ರತಿ ವರ್ಷ ಸರ್ಕಾರವೇ ಆಚರಿಸಬೇಕಲ್ಲದೆ, ವಿಜಯೋತ್ಸವದ ದಿನದಂದು ಸರ್ಕಾರಿ ರಜೆ ಘೋಷಿಸಬೇಕೆಂದು ಆಗ್ರಹಿಸಿ ಅ. 27ರಂದು ಗದುಗಿನ ವಿಜಯೋತ್ಸವವನ್ನು ಯಾವುದೇ ರೀತಿಯ ತೊಂದರೆ ಆಗದಂತೆ ಅತ್ಯಂತ ಅಚ್ಚುಕಟ್ಟಾಗಿ ಅದ್ಧೂರಿಯಾಗಿ ಆಚರಿಸಲು ಸೂಕ್ತ ಸಿದ್ಧತೆ ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಗದಗ ಜಿಲ್ಲೆಯ ವಿವಿಧ ಕಲಾ ತಂಡಗಳು, ಡೊಳ್ಳು ಮೇಳ, ಯುವಕ-ಯುವತಿ ಮೇಳ, ಸ್ತಬ್ಧ ಚಿತ್ರ ಮೆರವಣಿಗೆ, ಅಟೋ ಮತ್ತು ಟಾಂಗಾ ಸಂಘಟನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಹಮಾಲರು ಮತ್ತು ಚಕ್ಕಡಿಯವರು ಹಾಗೂ ರೈತಾಪಿ ವರ್ಗದವರು ಅಲಂಕೃತ ಎತ್ತುಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುವರು ಎಂದರು.
ಸನ್ಮಾನ: ಶಿಕ್ಷಣ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾನ್ವಿತರಿಗೆ ಮತ್ತು ಸಾಧಕರಿಗೆ ಸಮಾರಂಭದಲ್ಲಿ ಸನ್ಮಾನಿಸಲು ನಿಶ್ಚಯಿಸಲಾಯಿತು. ಚನ್ನವೀರಪ್ಪ ಮಳಗಿ, ಬಸವಂತಗೌಡ ಕಡಬಲಕಟ್ಟಿ, ಅಯ್ಯಪ್ಪ ಅಂಗಡಿ, ತೋಟದ ಗುರುಗಳು, ಡಾ. ಶಿವಶಂಕರ ಪೂಜಾರ, ಎಂ.ಎಸ್. ಹುಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ವಿಜಯೇಂದ್ರಗೌಡ ವಡವಿ, ಈರಪ್ಪ ಮುಳ್ಳಾಳ, ಗವಿಸಿದ್ದಪ್ಪ ಹಕ್ಕಿ, ಎಚ್.ಪಿ. ಭೀಮನಗೌಡ, ಸಿದ್ದಲಿಂಗಪ್ಪ ತುರಕಾಣಿ, ಈರಣ್ಣ ಕಮತರ, ಬಸವರಾಜ ಹತ್ತಿ, ಮಲ್ಲಿಕಾರ್ಜುನ ಕಮತರ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಈಶ್ವರಗೌಡ ಭರಮಗೌಡ್ರ, ಆರ್.ಜಿ. ತುಪ್ಪದ, ಕೆ.ಆರ್.ಪಾಟೀಲ, ಎಸ್.ಬಿ. ಕೊಡೆಕಲ್, ಎಂ.ಎಸ್. ಮುಳವಾಡ, ಬಿ.ಎಸ್. ಹೊಸಮಠ, ಎಂ.ಎಸ್. ರೇವಡಿಹಾಳ, ಮಂಜುನಾಥ ಬೊಮ್ಮಣ್ಣವರ, ಸಿ.ಎಚ್. ಶಂಕರಗೌಡ, ಅಮರೇಶ ಅಂಗಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement