ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಷ್ಟದಲ್ಲಿಯೂ ಗಟ್ಟಿ ವ್ಯಕ್ತಿತ್ವ ಪ್ರದರ್ಶಿಸಿದ ಶ್ರೀರಾಮುಲು

Lingaraj Badiger
Updated On : 24 Oct 2013, 11:01 am

ಗದಗ: ಕಷ್ಟದಲ್ಲಿಯೂ ಸಹ ಗಟ್ಟಿವ್ಯಕ್ತಿತ್ವ ಪ್ರದರ್ಶಿಸುವ ಮೂಲಕ ಸಾಮೂಹಿಕ ವಿವಾಹಗಳನ್ನು ವೈಭವಯುತವಾಗಿ ನೆರವೇರಿಸಿರುವ ಶ್ರೀರಾಮುಲು ಭಾವುಕತನ ಕೈಬಿಟ್ಟು ಬೆನ್ನಹಿಂದಿರುವ ನಕಲಿ ಅಭಿಮಾನಿಗಳನ್ನು ದೂರವಿರಿಸಿ ಅಸಲಿ ಅಭಿಮಾನಿಗಳಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಬುಧವಾರ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಶ್ರೀರಾಮುಲು   
ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ 7ನೇ ವರ್ಷದ ಬೃಹತ್ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಧಿಕಾರ ಮತ್ತು ಹಣವಿದ್ದಾಗ ಆತ್ಮೀಯರಂತೆ ವರ್ತಿಸುವ ವಿಶ್ವಾಸದ್ರೋಹಿಗಳ ಕುರಿತು ಶ್ರೀರಾಮುಲು ಗಮನಹರಿಸಬೇಕಿದೆ. ಕಳೆದ 7 ವರ್ಷಗಳಿಂದ ಅವಳಿ ನಗರಕ್ಕೆ ಘನತೆ ತರುವ ಕಾರ್ಯ ಶ್ರೀರಾಮುಲು ನೇತೃತ್ವದಲ್ಲಿ ಅಭಿಮಾನಿಗಳಿಂದ ಜರುಗುತ್ತಿದ್ದು, ಬದುಕಿನಲ್ಲಿ ಕತ್ತಲೆ ಮತ್ತು ಬೆಳಕು, ಕಷ್ಟ-ಸುಖ ಸಹಜವಾಗಿದ್ದು, ಧೈರ್ಯಂ ಸವತ್ರ ಸಾಧನಂ ಎಂಬುದನ್ನು ಅರಿತು ಲಿಂಕನ್‌ರ ಜೀವನದ ಮೌಲ್ವಿಕ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಿದೆ. ಕಳೆದ 7 ವರ್ಷಗಳಿಂದ ಸತತವಾಗಿ ಸಾಮೂಹಿಕ ವಿವಾಹ ಸೇರಿದಂತೆ ಹಲವಾರು ಸಾಮಾನ್ಯನ ಸಮಸ್ಯೆಗಳಿಗೆ ಸ್ಪಂದಿಸುತ್ತ ಸಾಗಿರುವ ಶ್ರೀರಾಮುಲುರಂತಹ ನಾಯಕರ ಋಣ ತೀರಿಸುವ ಕಾರ್ಯ ನಾಗರಿಕ ಸಮಾಜದಿಂದ ಜರುಗಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement