ಕಿತ್ತೂರು ಚನ್ನಮ್ಮಳ ಪ್ರತಿಮೆಗೆ ಮಾಲಾರ್ಪಣೆ
ಕನ್ನಡಪ್ರಭ ವಾರ್ತೆ, ಗದಗ, ಅ. 24
ವೀರರಾಣಿ ಕಿತ್ತೂರು ಚನ್ನಮ್ಮಳ 190ನೇ ವಿಜಯೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ನಗರದ ವೀರರಾಣಿ ಕಿತ್ತೂರು ಚನ್ನಮ್ಮಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಪ್ರಭುರಾಜಗೌಡ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲು ಗೊಲ್ಲರ, ಸದಸ್ಯ ಚೇತನಕುಮಾರ ಹುಡೇದ, ಭೂಷಣ್ ಅಣ್ಣಿಗೇರಿ, ಆನಂದ ಧಾರವಾಡ, ಕೃಷ್ಣಾ ಗೌಡರ್, ರಾಜು ಪೂಜಾರ, ನಾಗರಾಜ ಪೊಲೀಸ್, ವೀರೇಶ ಹೂಗಾರ ಉಪಸ್ಥಿತರಿದ್ದರು.