ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಂಚಮಸಾಲಿ ಸಮಾಜದ ಸಂಘಟನೆ ಅವಶ್ಯ: ಸ್ವಾಮೀಜಿ

Lingaraj Badiger
Updated On : 25 Oct 2013, 10:57 am

ನರಗುಂದ: ರಾಜ್ಯದ ಬಹುಸಂಖ್ಯಾತ ಲಿಂಗಾಯತ ಸಮಾಜದಲ್ಲಿ ಅತಿ ಹೆಚ್ಚು ಜನ ಸಮುದಾಯ ಇರುವ ಪಂಚಮಸಾಲಿ ಸಮಾಜ ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯಲು ಸಮಾಜದ ಸಂಘಟನೆ ಅವಶ್ಯವಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಅವರು ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಗುರುವಾರ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ, ಪಂಚಮಸಾಲಿ ಸಮಾಜ ವಿವಿದೋದ್ಧೇಶಗಳ ಸಂಘ, ಹಾಗೂ ರಾಣಿ ಚನ್ನಮ್ಮಾ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಿತ್ತೂರ ಚನ್ನಮ್ಮಾಜಿಯ 190ನೇ ವಿಜಯೋತ್ಸವ ಹಾಗೂ ಚನ್ನಮ್ಮ ಮೂರ್ತಿ ಅನಾವರಣ, ಸಮಾಜದ ಬೃಹತ್ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಿ, ಈ ತಾಲೂಕಿನಲ್ಲಿ ಕಿತ್ತೂರ ರಾಣಿ ಚನ್ನಮ್ಮಳ ಸಮುದಾಯ ಭವನ ಸೇರಿದಂತೆ ಸಮಾಜಕ್ಕೆ ಉಪಯೋಗ ಆಗಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಅದಕ್ಕೆ ತಾಲೂಕಿನ ಸಮಾಜ ಬಾಂಧವರು, ಯಾವುದೇ ಪಕ್ಷಗಳಲ್ಲಿ ಇರಲಿ ಆದರೆ ಸಮಾಜ ಕಾರ್ಯಕ್ಕೆ ಮಾತ್ರ ತಮ್ಮ ಸಹಕಾರ ನೀಡಬೇಕು ಎಂದರು. ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ ಸಸಿಗಳಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಗೃಹಗುಡ್ಡದ ಹಿರೇಮಠದ ಸಿದ್ದಲಿಂಗ ಶ್ರೀಗಳು, ಪತ್ರೀವನ ಮಠದ ಸಿದ್ಧವೀರ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಶಾಸಕ ಬಿ.ಆರ್. ಯಾವಗಲ್ಲ, ಮಾಜಿ ಸಚಿವ ಸಿ.ಸಿ. ಪಾಟೀಲ, ಪ್ರಭಣ್ಣ ಹುಣಸಿಕಟ್ಟಿ, ಎಂ. ಶಿವಪ್ಪ, ಸಮಾಜದ ರಾಜ್ಯ ಯುವಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ತಾಪಂ ಸದಸ್ಯ ವಿ.ಎನ್. ಕೊಳ್ಳಿಯವರ, ಎಫ್.ಆರ್. ಪಾಟೀಲ, ಎಂ.ಎಸ್. ಪಾಟೀಲ, ಆರ್.ಎನ್. ಪಾಟೀಲ, ಎಂ.ಎಸ್. ಕರಿಗೌಡರ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ತಾಲೂಕು ಅಧ್ಯಕ್ಷ ಡಾ. ಸಿ.ಕೆ. ರಾಚನಗೌಡರ ಸ್ವಾಗತಿಸಿದರು. ಸಿದ್ಧಲಿಂಗಪ್ಪ ಬೀಳಗಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement