ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಾರನಬಸರಿ ಅಭಿವೃದ್ಧಿಗೆ ರು. 2 ಕೋಟಿ

Lingaraj Badiger
Updated On : 25 Oct 2013, 10:50 am

ಕನ್ನಡಪ್ರಭ ವಾರ್ತೆ, ರೋಣ, ಅ. 24
ಮಾರನಬಸರಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ರು. 2 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈಚೆಗೆ ತಾಲೂಕಿನ ಮಾರನಬಸರಿ ಗ್ರಾಮದ ವಾಲ್ಮೀಕಿ ನಗರದಲ್ಲಿ ಭೂ ಸೇನಾ ನಿಗಮದಿಂದ ನಿರ್ಮಿಸಲಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ರು. 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗ್ರಾಮಸ್ಥರ ಬಹುದಿನದ ಬೇಡಿಕೆಯಾದ ಗ್ರಾಮದ ಹಳ್ಳದ ಸೇತುವೆಯನ್ನು ರು. 1 ಕೋಟಿಯಲ್ಲಿ ನಿರ್ಮಿಸಲಾಗುವುದು ಹಾಗೂ ರು. 70 ಲಕ್ಷ ವೆಚ್ಚದಲ್ಲಿ ಪ್ರೌಢ ಶಾಲೆಯ ಕಟ್ಟಡಗಳನ್ನು ನಿರ್ಮಿಸುವುದು, ಮಾರನಬಸರಿ ಗ್ರಾಮದಿಂದ ಹೊಸಳ್ಳಿ ರಸ್ತೆಯನ್ನು ರು. 1 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಗೊಳಿಸುವುದು ಸೇರಿದಂತೆ ಮಾರನಬಸರಿಯಿಂದ ಜಿಗಳೂರ ರಸ್ತೆ ಹಾಗೂ ಮಾರನಬಸರಿಯಿಂದ ನರೆಗಲ್ಲ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಮಾರನಬಸರಿಯಿಂದ ರೋಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಎಲ್ಲ ಕಾಮಗಾರಿಗಳಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದರು.
ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲಪ್ಪಜ್ಜನ ದೇವಸ್ಥಾನದ ಮರು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ರು. 2 ಲಕ್ಷ ಒದಗಿಸಲಾಗಿದ್ದು, ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು. ಗ್ರಾಮದ ಹುಚ್ಚಿರೇಶ್ವರ ಗದ್ದುಗೆ ಹತ್ತಿರ ಸುಂದರ ಉದ್ಯಾನವನ್ನು ನಿರ್ಮಿಸುವುದರ ಜತೆಗೆ ಸಾರ್ವಜನಿಕ ಗ್ರಂಥಾಲಯ ಹಾಗೂ ಆರೋಗ್ಯ ಉಪ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಜಕ್ಕಲಿ ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಮೇಟಿ, ಶಿವಶರಣಪ್ಪ ಅಬ್ಬಿಗೇರಿ, ಉಮೇಶ ದಿಂಡೂರ, ಡಾ. ಶಶಿಧರ ಹಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಶೇಖರಪ್ಪ ಮ್ಯಾಗೇರಿ ವಹಿಸಿದ್ದರು, ವಿ.ಆರ್. ಗುಡಿಸಾಗರ, ತಾಪಂ ಸದಸ್ಯೆ ಮಾಲಾನಬಿ ಗಡಾದ, ಅಂದಪ್ಪ ಬಿಚ್ಚೂರ, ರೈಮಾನಸಾಬ ಮೋತೆಖಾನ, ಮಕ್ತುಮಸಾಬ್ ಮೋತೆಖಾನ, ಸಂಗನಬಸಪ್ಪ ಹಾದಿಮನಿ, ಖಾಸೀಮಸಾಬ್ ದೋಟಿಹಾಳ, ಯಮನೂರಸಾಬ ಆಲೂರ, ಬಸವರಾಜ ಹೂಗಾರ, ವಿಜಯಲಕ್ಷ್ಮಿ ಹಾದಿಮನಿ, ಶಿವಪ್ಪ ಜಾಲಿಹಾಳ, ಅಂದಪ್ಪ ಮರಡಿ, ಪರಸಪ್ಪ ತಳವಾರ, ಹನುಮಂತಪ್ಪ ಕಲ್ಮಣಿ ಮುಂತಾದವರು ಉಪಸ್ಥಿತರಿದ್ದರು. ವೆಂಕಟೇಶ ಸಾಖಾ ಸ್ವಾಗತಿಸಿದರು. ಪರಶುರಾಮ ಅಬ್ಬಿಗೇರಿ ನಿರೂಪಿಸಿದರು. ಶ್ರೀಕಾಂತ ಕುಲಕರ್ಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement