ಇಂದು ಕಿತ್ತೂರು ಚನ್ನಮ್ಮ ವಿಜಯೋತ್ಸವ
ಮುಂಡರಗಿ: ತಾಲೂಕು ಪಂಚಮಸಾಲಿ ಘಟಕ ಮತ್ತು ಶಹರ ಘಟಕ ಹಾಗೂ ತಾಲೂಕು ಪಂಚಮಸಾಲಿ ನೌಕರರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ. 26ರಂದು ಬೆಳಗ್ಗೆ 10.25 ಗಂಟೆಗೆ ಪಟ್ಟಣದ ಪುರಸಭೆಯ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ 190ನೇ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9ಕ್ಕೆ ಕೋಟೆಭಾಗದಿಂದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಭಾವಚಿತ್ರದ ಮೆರವಣಿಗೆ ನಡೆಯುವುದು. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಚಾಲನೆ ನೀಡುವರು. ಉದ್ಘಾಟನೆಯನ್ನು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜ. ಬಸವಜಯ ಮೃತ್ಯಂಜಯ ಶ್ರೀಗಳು ಮತ್ತು ಹರಿಹರ ಪೀಠದ ಪಂಚಮಸಾಲಿ ಜ. ಸಿದ್ದಲಿಂಗೇಶ್ವರ ಶ್ರೀಗಳು ನೆರವೇರಿಸುವರು. ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸುವರು. ಉತ್ಸವ ಸಮಿತಿ ಗೌರವಾಧ್ಯಕ್ಷ ಕೊಟ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಸಚಿವ ಕಳಕಪ್ಪ ಬಂಡಿ, ಹುನಗುಂದ ಶಾಸಕ ಡಾ. ವಿಜಯಾನಂದ ಕಾಶಪ್ಪನವರ, ಧಾರವಾಡ ಶಾಸಕ ವಿನಯ ಕುಲಕರ್ಣಿ ಮತ್ತಿತರರನ್ನು ಸನ್ಮಾನಿಸಲಾಗುವುದು. ಆರ್.ಎಲ್. ಪೊಲೀಸ್‌ಪಾಟೀಲ ಮತ್ತು ಎ.ವೈ. ನವಲಗುಂದ ಉಪನ್ಯಾಸ ನೀಡುವರು. ಡಾಕ್ಟರೇಟ್ ಪದವಿ ಪಡೆದ ಡಾ. ನಿಂಗು ಸೊಲಗಿ, ಶಿಕ್ಷಣ ರತ್ನ ಪ್ರಶಸ್ತಿ ಪಡೆದ ಎಂ.ಎಸ್. ಹೊಟ್ಟಿನ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ವಿ. ಅರಿಷಿಣದ, ವಿಜಯೋತ್ಸವದ ಸಂಚಾಲಕ ಬಸವರಾಜ ದೇಸಾಯಿ, ಬಸವರಾಜ ನವಲಗುಂದ ಇವರನ್ನು ಸನ್ಮಾನಿಸಲಾಗುವುದು.