ಕರ್ತವ್ಯಲೋಪ: ಮಹಿಳೆ ಮೇಲೆ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 25
ಕೊಕ್ಕರಗುಂದಿ ಗ್ರಾಪಂ ವ್ಯಾಪ್ತಿಯ ಕೊಂಚಿಗೇರಿ, ಬೂದಿಹಾಳ ಗ್ರಾಮಗಳಲ್ಲಿ ವಾಲೀಕಾರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾತೀಮಾ ಇಸ್ಮಾಯಿಲ್ಸಾಹೇಬ ಸೇತಸನದಿ ಎಂಬ ಮಹಿಳೆ ಗ್ರಾಮಸ್ಥರ ಮೆಲೆಯೇ ದಬ್ಬಾಳಿಕೆ ಮಾಡುತ್ತಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ತಕ್ಷಣವೇ ಇವರನ್ನು ಕೆಲಸದಿಂದ ತೆಗೆದು ಹಾಕಿ, ಶೈನಾಜಬಿ ಇಬ್ರಾಹಿಂಸಾಹೇಬ ನದಾಫ್ ಇವರನ್ನು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಡಿ.ಎಂ. ಮುಂದಲಮನಿ, ಅಶೋಕ ಬಡಿಗೇರ ಮಾತನಾಡಿ, ಸದ್ಯ ವಾಲಿಕಾರ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಬೇಜವಾಬ್ದಾರಿ ತೋರುತ್ತಿದ್ದಾರೆ.
ಗ್ರಾಮಸ್ಥರು ಹಾಗೂ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅನೈತಿಕ ಚಟುವಟಿಕೆ ಹಾಗೂ ಅಕ್ರಮ ದಂಧೆಯಲ್ಲಿ ತೊಡಗಿರುವವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಇವರ ಮಗ ಇಸ್ಮಾಯಿಲ್ ಸೇತಸನದಿಯೂ ತಾಯಿಯ ಪ್ರಚೋದನೆಯಿಂದ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಮರಳು ಚಟುವಟಿಕೆ ಕಾರ್ಯದಲ್ಲಿ ತೊಡಗಿರುವವರಿಗೆ ಎಲ್ಲ ಮಾಹಿತಿ ನೀಡುತ್ತಾ ಅವರಿಂದ ಹಣ ವಸೂಲಿ ಮಾಡುತ್ತಿದ್ದಾನೆ. ಗ್ರಾಮದ ಮಹಿಳೆಯರ ಮತ್ತು ಯುವತಿಯರ ಮೇಲೆ ಅತ್ಯಾಚಾರ ಮಾಡಿದ ಸಾಕಷ್ಟು ಉದಾಹರಣೆಗಳು ಕಂಡುಬಂದಿವೆ. ಇವೆಲ್ಲದಕ್ಕೂ ತಾಯಿಯೇ ಕುಮ್ಮಕ್ಕು ನೀಡುತ್ತಿದ್ದು, ಅಧಿಕಾರಿಗಳು ಪರಿಶೀಲನೆ ಮಾಡಿ ಆಕೆಯನ್ನು ಈ ಕೆಲಸದಿಂದ ವಜಾ ಮಾಡುವಂತೆ ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಯಾವುದೇ ಕಾರಣಕ್ಕೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸದೇ ಇವರನ್ನು ಕೆಲಸದಿಂದ ತೆಗೆದು ಹಾಕಿ, 15 ದಿನದೊಳಗೆ ಶೈನಾಜಬಿ ನದಾಫ ಇವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಕೊಕ್ಕರಗುಂದಿ, ಕೊಂಚಿಗೇರಿ ಬೂದಿಹಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಯಲ್ಲಮ್ಮ ಆನೆಪ್ಪನವರ, ದೇವಪ್ಪ ಲಮಾಣಿ, ಶಿವಪುತ್ರಪ್ಪ ಮಾದರ, ಎಂ.ಎನ್. ಬಿರಬ್ಬಿ, ರಾಜು ಹತ್ತಿಕಾಳ, ಮಹೇಶ ಕೋಡಬಾಳ, ಅಶೋಕ ಗಾಣಿಗೇರ, ರಜಾಕಸಾಬ್ ನದಾಫ, ಡಿ.ವಿ. ಮಲ್ಲಗೌಡ್ರ, ಎಂ.ಎಂ. ಹುಡೇದ, ಪರಮೇಶಪ್ಪ ಸಿದ್ದನೌಡ್ರ, ಫಕೀರಸಾಬ ನದಾಫ, ಶಂಕ್ರಯ್ಯ ಹಿರೇಮಠ, ಎಂ.ಪಿ. ಬೂದಿಹಾಳ, ಬಿ.ಎಸ್. ಬೆಳವಗಿ, ಆರ್.ಆರ್. ನದಾಫ, ಪಿ.ಜಿ. ಕಟ್ಟಿಮನಿ, ಪಿ.ಎಂ. ನಂದಗಾವಿ, ಮಾದೇವಕ್ಕ ಹರಿಜನ, ಶೇಕಪ್ಪ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.