ನೀರು ಪೂರೈಕೆ ಮಾಹಿತಿ
ಗದಗ: ನಗರದ ಹಿರೇಮಠ ಲೈನ್, ಈಶ್ವರ ಬಡಾವಣೆ ಭಾಗ 1 2, ಪ್ರಕಲ್ಪ ಶಾಲೆ ಲೈನ್, ಜಾಲಿಹಾಳ, ಲೈನ್, ಕಂಬ್ಲಿ ಸರ್ ಲೈನ್, ಪಾಪನಾಳ ಲೈನ್, ಕೂಳ್ಳಿ ಲೈನ್, ಮೇಟಿ ಸರ್ ಲೈನ್, ಹುಡ್ಕೂ ಲೈನ್, ಮಟ್ಟಿ ವಕೀಲರ ಲೈನ್, ಚೇಗರೆಡ್ಡಿ ಲೈನ್, ಬಳ್ಳಾರಿ ಲೈನ್, ಚರ್ಚ್ ರೋಡ್, ಗೊಂಡವಾಳ ಲೈನ್, ಸರ್ವೇಯವರ ಲೈನ್, ಮಾಳಶೆಟ್ಟಿ ಲೈನ್, ನರೇಗಲ್ ಲೈನ್, ಹೋಳೆಯವರ ಲೈನ್, ವೀರನಗೌಡ ಪಾಟೀಲ ಲೈನ್, ಲಿಂಬಯ್ಯಮಠ ಲೈನ್, ದಂಡಿನ ಲೈನ್, ಅಂಗಡಿ ಮ್ಯಾನೇಜರ್ ಲೈನ್, ಜೋಶಿಯವರ ಲೈನ್, ನವೋದಯ ಮನೆ ಲೈನ್, ಚಿಕ್ಕಮಠ ಲೈನ್, ಗವಿಮಠ ಲೈನ್, ಮಂಜು ನಾಗರಾಳ ಲೈನ್, ಇರಾಣಿ ಕಾಲೋನಿ ಲೈನ್, ಚಂಗೇಜಖಾನ ಲೈನ್, ಕೋಳಿ ಮಾಸ್ತರ ಲೈನ್, ಹಿಟ್ಟಿನ ಗಿರಣಿ ಲೈನ್, ಖಾಜಿ ಲೈನ್, ಮುನ್ನಾ ಲೈನ್, ನಾಡಗೌಡ್ರ ಲೈನ್, ಬಿನ್ನಾ ಲೈನ್, ಉಪ್ಪಿನ ಲೈನ್, ಶಿವಾನಂದ ನಗರ, ನಂದಿಶ್ವರ ನಗರ, ಬೈಲು ಆಂಜನಯ್ಯ ಗುಡಿ ಹತ್ತಿರ ಈ ಭಾಗಗಳಲ್ಲಿ ಶನಿವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಹಂದಿ, ನಾಯಿ ಹಾವಳಿ: ಮನವಿ
ಮುಂಡರಗಿ: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಬರುವ 9ನೇ ವಾರ್ಡ್ನಲ್ಲಿ ಮಾಂಸದಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇಲ್ಲಿ ನಾಯಿ, ಹಂದಿಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಮಜ್ಜೂರೇಶ್ವರಿ ಯುವಕ ಸಂಘದ ಸದಸ್ಯರು ಗುರುವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ನಾಯಿ, ಹಂದಿಗಳ ಕಾಟದಿಂದಾಗಿ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಈ ಕೂಡಲೇ ಬೇರೆಡೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ. ಮಜ್ಜೂರೇಶ್ವರಿ ಯುವಕ ಸಂಘದ ಸಂತೋಷ ಹಿರೇಮನಿ, ಮಜ್ಜೂರೇಶ ಪೂಜಾರ, ಹನುಮಂತ ಅಣ್ಣೀಗೇರಿ, ಶಶಿಕಾಂತ ಸವಣೂರ, ಮೈಲಾರಪ್ಪ ಹಾಲಿನವರ, ಮೈಲಾರಪ್ಪ ಮಾಯಮ್ಮನವರ ಇದ್ದರು.