ಪರಿಷತ್ಗೆ ನೇಮಕ
ಗದಗ: ಕರ್ನಾಟಕ ಜಾನಪದ ಪರಿಷತ್ನ ರೋಣ ತಾಲೂಕು ಘಟಕದ ಅಧ್ಯಕ್ಷರಾಗಿ ಶಂಕ್ರಣ್ಣ ಸಂಕಣ್ಣವರ ಹಾಗೂ ಕಾರ್ಯದರ್ಶಿಯಾಗಿ ಬಸವರಾಜ ಪಾಗದ ಅವರನ್ನು ನೇಮಕಗೊಳಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ನ ಗದಗ ಜಿಲ್ಲಾಧ್ಯಕ್ಷ ಡಾ. ಸಿದ್ದಣ್ಣ ಜಕಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಲೆಕ್ಕ ಪರಿಶೋಧನೆ ವೇಳಾಪಟ್ಟಿ
ಗದಗ: ಜಿಲ್ಲೆಯ 5 ತಾಲೂಕುಗಳ ಗ್ರಾಮ ಪಂಚಾಯತ್ಗಳಲ್ಲಿ ಜಾರಿಯಲ್ಲಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ನವೆಂಬರ್ 15 ರಿಂದ ಜನವರಿ 31ರ ಅವಧಿಯಲ್ಲಿ ಜರುಗಬೇಕಾದ ಈ ಪರಿಶೋಧನೆಗೆ ಆಯಾ ಗ್ರಾಪಂಗಳ ಅವಧಿಯನ್ನು, ಗ್ರಾಮ ಸಭೆ ಜರುಗಿಸುವ ದಿನಾಂಕವನ್ನು ಸಭೆಯ ಅಧ್ಯಕ್ಷತೆ ವಹಿಸಬೇಕಾದ ನೋಡಲ್ ಅಧಿಕಾರಿ ಹಾಗೂ ಸಾಮಾಜಿಕ ಪರಿಶೋಧನೆ ನಿರ್ವಹಿಸುವ ತಾಲೂಕು ಸಂಯೋಜಕರ ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳನ್ನು ನಿಯಮಿಸಿ ಸಿಇಒ ವಿ.ಜಿ. ತುರಮರಿ ಆದೇಶ ಹೊರಡಿಸಿದ್ದಾರೆ. ಗದಗ ತಾಲೂಕಿನ 25, ಮುಂಡರಗಿ 15, ನರಗುಂದದ 12, ರೋಣ 30 ಹಾಗೂ ಶಿರಹಟ್ಟಿ ತಾಲೂಕಿನ 24 ಗ್ರಾಪಂಗಳಲ್ಲಿ ಈ ಸಾಮಾಜಿಕ ಪರಿಶೋಧನೆ ಜರುಗಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.