ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯುವಪೀಳಿಗೆ ದೇಶ ರಕ್ಷಣೆಗೆ ಮುಂದಾಗಿ

Rashmi Kasaragodu
Updated On : 27 Oct 2013, 1:04 am

ನರಗುಂದ: ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಬಹಳ ಸಂಪತ್ತು ಹೊಂದಿದ ಭಾರತ ದೇಶವನ್ನು ಹಾಳುಮಾಡಲು ಹಲವು ರಾಜ-ಮಹಾರಾಜರು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ. ಆದರೆ ಇಂದು ನಮ್ಮ ದೇಶವನ್ನು ನಾವೇ ಹಾಳುಮಾಡುತ್ತಿದ್ದು, ಯುವಪೀಳಿಗೆ ಎಚ್ಚೆತ್ತು ದೇಶ ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆರ್ಎಸ್ಎಸ್ನ ಧಾರವಾಡ ಸಹ ವಿಭಾಗದ ಕಾರ್ಯನಿರ್ವಾಹಕ ಕಿರಣ ಗುಡ್ಡದಕೇರಿ ಹೇಳಿದರು.
ಅವರು ಪಟ್ಟಣದ ಶಾಲೆ ನಂ. 2ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ನಡೆದ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 1925ರಲ್ಲಿ ಆರ್ಎಸ್ಎಸ್ ಸ್ಥಾಪನೆಯಾಗಿದ್ದು, ಹಲವಾರು ಬಾರಿ ದೇಶಕ್ಕೆ ಭೂಕಂಪ, ಪ್ರವಾಹ, ನೆರಹಾವಳಿ ಇತರೆ ಸಮಸ್ಯೆ ತಲೆದೂರಿದ ಸಂದರ್ಭದಲ್ಲಿ ಮೊಟ್ಟಮೊದಲು ಸಾರ್ವಜನಿಕರ ಸಹಾಯಕ್ಕೆ ಹೋಗುವರೇ ನಮ್ಮ ಸಂಘದವರು ಎಂದು ಹೇಳಲು ನನಗೆ ಸಂತಸವಾಗುತ್ತದೆ. ಮೇಲಾಗಿ ಈಗಾಗಲೇ 80 ವಿದೇಶಗಳಲ್ಲಿ ಆರ್ಎಸ್ಎಸ್ ಶಾಖೆಗಳನ್ನು ತೆರೆದು ಸಮಾಜದ ಕಾರ್ಯದಲ್ಲಿ ಪಾಲ್ಗೊಂಡಿದೆ. ಇಂತಹ ಸಂಘದಲ್ಲಿ ಪ್ರತಿಯೊಂದು ಕುಟುಂಬದಲ್ಲಿನ ತಮ್ಮ ಮಕ್ಕಳನ್ನು ಸೇರಿಸಿ ದೇಶದ ಸಂಸ್ಕೃತಿ ಬಗ್ಗೆ ತಿಳಿಸಲು ಮುಂದಾಗಿ ಎಂದರು. ಸಾನ್ನಿಧ್ಯವಹಿಸಿದ್ದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಅಭಿಯಂತರ ಎಸ್.ಎ. ಕಾಳಗಿ, ಶ್ರೀನಿವಾಸ ಬೋನಗೇರಿ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಚಂದ್ರು ದಂಡಿನ, ಕೃಷ್ಣಾ ಮೇಗಲಮನಿ ಸೇರಿದಂತೆ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement