ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ಲರ್ಕ್ಸ್‌ಇನ್ ಹೋಟೆಲ್‌ನಿಂದ ಹಲವು ಯೋಜನೆ

Lingaraj Badiger
Updated On : 28 Oct 2013, 11:12 am

 ಕನ್ನಡಪ್ರಭ ವಾರ್ತೆ, ಗದಗ, ಅ. 27
ಜಿಲ್ಲೆಯು ಅಂತಾರಾಷ್ಟ್ರೀಯ ಐತಿಹಾಸಿಕ ಮತ್ತು ಪುರಾತತ್ವ ತಾಣಗಳನ್ನು ಹೊಂದಿದ್ದು, ಈ ಸ್ಥಳಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿನ ಕೇಶವ ಕ್ಲರ್ಕ್ಸ್‌ಇನ್ ಗದಗ ಹೋಟೆಲ್ ಹಲವು ಯೋಜನೆಗಳನ್ನು ಹೊಂದಿದೆ ಎಂದು ಸ್ಥಾನಿಕ ವ್ಯವಸ್ಥಾಪಕ ರಾಜದೀಪ ಬಲೇರಾವ್ ಹೇಳಿದರು.
ಅವರು ಅ. 27ಕ್ಕೆ ಕ್ಲಕ್ಸ್‌ಇನ್ ಹೋಟೆಲ್ ಉದ್ಘಾಟನೆಗೊಂಡು 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಮ್ಮ ಹೋಟೆಲ್ ಮೂಲಕ ಇಲ್ಲಿನ ಜನತೆಗೆ ಸುಲಭ ದರದಲ್ಲಿ ರಾಷ್ಟ್ರೀಯ ಪರಂಪರೆಯನ್ನು ಹೊಂದಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಹಾರ ಮೇಳವನ್ನು ಆರಂಭಿಸಲಾಗಿದೆ. ಬೇರೆ ಬೇರೆ ರಾಜ್ಯಗಳ ಊಟದ ಸವಿ ರುಚಿಯನ್ನು ಇಲ್ಲಿ ಜನತೆಗೆ ಉಣಬಡಿಸುತ್ತಿದ್ದು, 1 ವರ್ಷದ ಅವಧಿಯಲ್ಲಿ ಗ್ರಾಹಕರು ತಮ್ಮ ಹೋಟೆಲ್‌ನತ್ತ ಆಕರ್ಷಿತರಾಗಿದ್ದಾರೆಂದು ಸಂತೋಷ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿರುವ ಕ್ಲರ್ಕ್ಸ್‌ಇನ್ ಹೋಟೆಲ್ ಉತ್ತರ ಕರ್ನಾಟಕದಲ್ಲಿ ಚಿರಪರಿಚಿತವಾಗಿದ್ದು, ಅದೇ ಮಾರ್ಗದಲ್ಲಿ ಈ ಹೋಟೆಲ್ ಉದ್ಯಮದಲ್ಲಿ ಗ್ರಾಹಕರನ್ನು ಹಾಗೂ ಪ್ರವಾಸಿಗರನ್ನು ಒಂದು ಗೂಡಿಸುವ ಕಾರ್ಯವನ್ನು ಮಾಡುತ್ತಿದೆ. ಸ್ವಾತಂತ್ರ್ಯ ನಂತರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ಥಾಪಿತಗೊಂಡಿರುವ ಕ್ಲರ್ಕ್ಸ್-ಇನ್ ಸಮೂಹ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಂಡು ತನ್ನನ್ನು ತಾನು ಗುರುತಿಸಿಕೊಂಡಿದ್ದು, ಜವಳಿ ಉದ್ದಿಮೆ, ಹೋಟೆಲ್ ಹೀಗೆ ವಿವಿಧ ಸಮೂಹಗಳನ್ನು ಇದು ಹೊಂದಿದೆ ಎಂದರು.
2012 ಅಕ್ಟೋಬರ್ 27 ರಂದು ಗದುಗಿನ ವಿಕಾಸ ಸಾಹುಕಾರ ಮತ್ತು ಯೋಗೇಶ ಸಾಹುಕಾರ ಇವರ ಒಡೆತನದಲ್ಲಿ ಕೇಶವ ಕ್ಲರ್ಕ್ಸ್ ಇನ್ ಗದಗ ಹೋಟೆಲ್ ಅಸ್ತಿತ್ವಕ್ಕೆ ಬಂದಿತು. ಈ ಹೋಟೆಲ್ 50 ಎಸಿ ರೂಂಗಳನ್ನು ಹೊಂದಿದ್ದು, ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಕಾರ್ಯಕ್ರಮ ಸಭಾಂಗಣ, ಸ್ವಿಮಿಂಗ್ ಫೂಲ್ ಹಾಗೂ ಸಸ್ಯಹಾರ, ಶಾಕಾಹಾರಿ ಊಟ ಉಣಬಡಿಸುವ ಕ್ಲರ್ಕ್ಸ್ ಇನ್ ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಕೈಗೆಟುಕುವ ದರದಲ್ಲಿ ಪ್ಯಾಕೇಜ್ ಟೂರು ಹಾಗೂ ಊಟದ ವ್ಯವಸ್ಥೆಯನ್ನು ಪೂರೈಸುತ್ತದೆ.
ಗದಗ ಹತ್ತಿರಕ್ಕೆ ಹೊಂದಿಕೊಂಡಿರುವ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ, ಲಕ್ಕುಂಡಿ, ತ್ರಿಕೂಟೇಶ್ವರ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ ಮುಂತಾದ ಪಾರಂಪರಿಕ ಸ್ಥಳಗಳನ್ನು ಹೊಂದಿದ್ದು, ಇವುಗಳನ್ನು ಪ್ರವಾಸಿಗರಿಗೆ ಸರಳವಾಗಿ ತಲುಪಿಸಲು ಕ್ಲರ್ಕ್ಸ್‌ಇನ್ ಹೋಟೆಲ್ ಪ್ಯಾಕೇಜ್ ಕಾರ್ಯಕ್ರಮದ ವ್ಯವಸ್ಥೆ ಮಾಡುತ್ತದೆ ಎಂದರು. ಹುಬ್ಬಳ್ಳಿಯ ಕ್ಲರ್ಕ್ಸ್‌ಇನ್ ಹೋಟೆಲ್ ಜನರಲ್ ಮ್ಯಾನೇಜರ್ ಪುಷ್ಪರಾಜ ಮೊಹಂತಿ, ಅರುಣ ಸವದತ್ತಿ, ಅಜಯ, ಹೋಟೆಲ್ ಮಾಲೀಕ ಯೋಗೇಶ ಸಾಹುಕಾರ, ವಿಕಾಸ ಸಾಹುಕಾರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement