ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಷ್ಟಾರ್ಥ ಪೂರೈಸುವ ಸಿದ್ಧಿಪುರುಷ ಮಣಕವಾಡ ಮೃತ್ಯುಂಜಯ ಶ್ರೀ

Lingaraj Badiger
Updated On : 30 Oct 2013, 12:23 pm

ಗದಗ: ಪವಾಡ ಪುರುಷರಾಗಿದ್ದ ಮಣಕವಾಡದ ಮೃತ್ಯುಂಜಯ ಶರಣರು ಭಕ್ತರ ಇಷ್ಟಾರ್ಥ ಪೂರೈಸುವ ಸಿದ್ಧಿಪುರುಷರಾಗಿದ್ದರು. ಅಂತಹ ಮಹಾಪುರುಷರು ಹಿರೇಹಂದಿಗೋಳ ಗ್ರಾಮದಲ್ಲಿ ನಡೆದಾಡಿ ಈ ಗ್ರಾಮವನ್ನು ಪುಣ್ಯಸ್ಥಳವನ್ನಾಗಿ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಹೇಳಿದರು.
ತಾಲೂಕಿನ ಹಿರೇಹಂದಿಗೋಳ ಗ್ರಾಮದ ಮಂಗಳ ಕಲಾಸಾಹಿತ್ಯ ವೇದಿಕೆ ಹಾಗೂ ಪಂಚಲಿಂಗೇಶ್ವರ ಭಜನಾ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಣಕವಾಡದ ಶ್ರೀಗಳ 101ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಮಾನಸಿಕ ನೆಮ್ಮದಿಗೆ ಹಾಗೂ ಸತ್ಸಂಗ ಬದುಕಿಗೆ ಅಧ್ಯಾತ್ಮಿಕತೆ ಇರಬೇಕಾಗುತ್ತದೆ. ಆಧ್ಯಾತ್ಮ ಹಸಿವು ಇರುವಾತನಿಗೆ ಜೀವನದಲ್ಲಿ ದುಃಖ ಎಂಬುವುದೇ ಇರುವುದಿಲ್ಲ. ಆಧ್ಯಾತ್ಮ ಅರಿವು ಮೂಡಿಸುವ ಕಾರ್ಯಗಳು ಇಂದಿನ ದಿನಮಾನದಲ್ಲಿ ಬಹಳ ಅಗತ್ಯವಾಗಿದೆ. ಮಣಕವಾಡ ಅಪ್ಪಣ್ಣವರ ಒಡನಾಟಿದಲ್ಲಿದ್ದವರ ಭಕ್ತರನ್ನು ಗಮನಿಸಲಾಗಿ ಬಹುತೇಕ ಭಕ್ತರು ಸೌಜನ್ಯ ಶೀಲರಾಗಿರುವುದು ಕಂಡುಬರುತ್ತದೆ. ಅಂತಹ ಮಹಾನ್ ಯೋಗಿಯ ಜನ್ಮದಿನ ಆಚರಿಸುವುದೆಂದರೆ ಪುಣ್ಯ ಫಲವನು ಪಡೆದುಕೊಂಡಂತೆ ಎಂದರು.
ಬಸವರಾಜ ಹೊಂಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಪ್ಪ ಅಂಬಿಗೇರ, ಮಲ್ಲೇಶಪ್ಪ ಅನವಾಲ, ಶಿವಲಿಂಗಪ್ಪ ಆರಟ್ಟಿ, ಪಂಚಪ್ಪ ಬ್ಯಾಹಟ್ಟಿ, ಅಶೋಕ ಅನವಾಲ, ವಿರೂಪಾಕ್ಷಯ್ಯ ಕಮಡೊಳ್ಳಿಮಠ, ದೇವಪ್ಪ ಕಲ್ಗುಡಿ, ರವಿ ಹೂಗಾರ, ಚನ್ನಪ್ಪ ಆರಟ್ಟಿ, ಸುರೇಶ ಹೂಗಾರ, ಮಾರುತಿ ಆರಟ್ಟಿ, ನಾಗಪ್ಪ ಕುರಿ, ಹನುಮಂತಪ್ಪ ಮಾರನಬಸರಿ, ಮಕ್ತುಮಸಾಬ ನದಾಫ್, ಶಿವಯ್ಯ ನಂದಿಕೋಲ ಮುಂತಾದವರು ಉಪಸ್ಥಿತರಿದ್ದರು.
ಶಿವಶಂಕ್ರಪ್ಪ ಆರಟ್ಟಿ ಸ್ವಾಗತಿಸಿದರು. ಶಿಕ್ಷಕ ಸಿ.ಡಿ. ಆರಟ್ಟಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement