ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಈಜಲು ಹೋದ ಇಬ್ಬರು ಬಾಲಕರ ದುರ್ಮರಣ

Rashmi Kasaragodu
Updated On : 30 Oct 2013, 12:41 pm

ಗೋಕಾಕ: ಸ್ನಾನಕ್ಕೆ ಹೋದ ಇಬ್ಬರು ಬಾಲಕರು ಹಳ್ಳದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ನಗರದಲ್ಲಿ ಸಂಭವಿಸಿದೆ. ಸುದೀಪ ಸಾತವೀರಯ್ಯ ಹುಕ್ಕೇರಿಮಠ (13), ಶ್ರೇಯಸ್ ರಾಜಶೇಖರ ಕುಮಾರಮಠ (13) ಮೃತಪಟ್ಟ ಬಾಲಕರು. ಸ್ನಾನ ಮಾಡಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದ ಈ ಬಾಲಕರು ನಗರ ಹೊರವಲಯದ ಗುಳಭಾಂವಿ ಹಳ್ಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂಜೆಯಾದರೂ ಮಕ್ಕಳು ಯಾಕೆ ವಾಪಸ್ ಬಂದಿಲ್ಲ ಎಂದು ಪೋಷಕರು ಪರಿಶೀಲಿಸಿದಾಗ ಇವರು ನೀರುಪಾಲಾದ ವಿಷಯ ತಿಳಿಯಿತು. ಬಾಲಕ ಸುದೀಪ ಹುಕ್ಕೇರಿಮಠ ಎಂಬಾತನ ಶವ ಸಿಕ್ಕಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಶ್ರೇಯಸ್ ಶವಕ್ಕಾಗಿ ಹಳ್ಳದಲ್ಲಿ ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement