ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ: ಕವಿತಾ

Vishwanath S
Updated On : 31 Oct 2013, 11:57 am

ಗದಗ: ಮಹಿಳೆಯರಿಗೆ ಉತ್ತಮ ಸ್ಥಾನಮಾನ ನೀಡಿ, ಗೌರವದಿಂದ ಕಾಣಬೇಕೆಂದು ತಿಮ್ಮಾಪುರ ಕೆವಿಎಸ್‌ಆರ್ ಕಾಲೇಜಿನ ಉಪನ್ಯಾಸಕಿ ಕವಿತಾ ಕಾಶಪ್ಪನವರ ಹೇಳಿದರು.
ಅವರು ತಾಲೂಕಿನ ಅಡವಿಸೋಮಾಪುರ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಗದಗನ ಕನಕದಾಸ ಶಿಕ್ಷಣ ಸಮಿತಿಯ ಕೆವಿಎಸ್‌ಆರ್ ಸಂಯುಕ್ತ ಪಪೂ ಮಹಾವಿದ್ಯಾಲಯದ ವತಿಯಿಂದ ಜರುಗಿದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಮಹಿಳಾ ಸಬಲೀಕರಣ ಕುರಿತು ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಕಾಲದ ಶಿಕ್ಷಣಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಮಹಿಳೆಯರಿಗೆ ಹೆಚ್ಚಿನ ಶಿಕ್ಷಣವನ್ನು ನೀಡಬೇಕಾಗಿದೆ. ಸಮಸ್ಯೆಗಳಿಗೆ ಬೆನ್ನು ತೋರಿಸದೆ ಧೈರ್ಯದಿಂದ ಎದುರಿಸಬೇಕು. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನು ಅರಿತುಕೊಂಡು ಶಾಲೆಯ ಎಲ್ಲ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ಅವಕಾಶಗಳಿಗಾಗಿ ಕಾಯಬಾರದು. ಅವಕಾಶವನ್ನು ಹುಡುಕಿಕೊಂಡು ಹೋಗಬೇಕು ಎಂದರು.
ವಿವಿಧ ರಂಗಗಳಲ್ಲಿ ಸೇವೆ: ಶಿಬಿರಾಧಿಕಾರಿ ಪ್ರೊ. ವಿ.ಎಸ್. ದಲಾಲಿ ಮಾತನಾಡಿ, ಇಂದು ಆರ್ಥಿಕ, ಸಾಮಾಜಿಕ ಹಾಗೂ ವಿವಿಧ ರಂಗಗಳಲ್ಲಿ ಮಹಿಳೆಯರು ಸೇವೆಗಳನ್ನು ನೀಡುತ್ತಿದ್ದಾರೆ.
ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದುವರೆಯುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಗ್ರಾಪಂ ಸದಸ್ಯೆ ಮಾಲಾ ಮೇವುಂಡಿ, ಲಲಿತಾ ಮೆಣಸಿನಕಾಯಿ, ಗೀತಾ ಕಂಬಳಿ, ಆರ್.ಎನ್. ಭಂಡಾರಿ, ಅಶೋಕ ಬಡಿಗೇರ, ವೀರಣ್ಣ ಅಂಗಡಿ ಇದ್ದರು.
ಸತ್ಯಮ್ಮ ಪೂಜಾರ ಪ್ರಾರ್ಥಿಸಿದರು. ದಾವಲಸಾಬ ಮಾಳೆಕೊಪ್ಪ ಸ್ವಾಗತಿಸಿದರು. ಶರಣಬಸವರಾಜ ಚಿಮ್ಮಲ ನಿರೂಪಿಸಿದರು. ಯಶೋದಾ ದಂಡಿನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement