ಶರಣರು ಜಾತಿ, ಮತ ಮೀರಿದವರು: ಶ್ರೀ
ನರೇಗಲ್ಲ: ಶರಣರು ಜಾತಿ ಮತಗಳನ್ನು ಮೀರಿದವರು, ಭಕ್ತಾದಿಗಳು ಧರ್ಮಮಾರ್ಗದಿಂದ ನಡೆದುಕೊಳ್ಳುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಲಿಂಗಸೂರ ಯರಡೋಣಿ ಸಿದ್ದರಾಮೇಶ್ವರ ಗುರುಮಠದ ಮುರುಘೇಂದ್ರ ಶ್ರೀಗಳು ಹೇಳಿದರು.
ಸ್ಥಳೀಯ ಕೋಡಿಕೊಪ್ಪದ ಹುಚ್ಚೀರಪ್ಪಜ್ಜನ ಮಠದಲ್ಲಿ ಜರುಗಿದ ಬಿಜಾಪುರ ತಾಲೂಕಿನ ಚಿಕ್ಕಗಲಗಲಿ ಯಲ್ಲಾಲಿಂಗೇಶ್ವರ ಮಠದ ಮಲ್ಲಪ್ಪಜ್ಜನವರ ತೃತೀಯ ಮೌನಾನುಷ್ಠಾನದ ಮುಕ್ತಾಯ, ಧರ್ಮಸಭೆ ಸಮ್ಮುಖ ವಹಿಸಿ ಮಾತನಾಡಿದರು.
ಬೀಳಗಿ ತಾಲೂಕು ಚಿಕ್ಕಹಂಚಿನಾಳದ ಶಾಂತನಂದ ಶ್ರೀ ಮಾತನಾಡಿ, ಮನುಕುಲದ ಉದ್ಧಾರ ಹಾಗೂ ಸ್ತಿರಸುಖ ಪಡೆಯಬೇಕಾದರೆ ನಿಷ್ಪಕ್ಷ ಮನೋಭಾವನೆ ಅಗತ್ಯ ಎಂದರು. ಅನುಷ್ಠಾನ ಕೈಗೊಂಡ ಚಿಕ್ಕಗಲಗಲಿ ಯಲ್ಲಾಲಿಂಗೇಶ್ವರ ಮಠದ ಮಲ್ಲಪ್ಪಜ್ಜನವರು ತಮ್ಮ 21 ದಿನಗಳ ಅನುಷ್ಠಾನ ಮುಕ್ತಾಯಗೊಳಿಸಿ ತಮ್ಮ ಅನುಭಾವ ನುಡಿಗಳನ್ನಾಡಿದರು. ಗಲಗಲಿಯ ಹನುಮಂತ ಮಂಟೂರ, ರಾಜ್ಯ ಬೀಜ ನಿಗಮ ಬೆಂಗಳೂರಿನ ನಿರ್ದೇಶಕ ಐ.ಎಸ್. ಪಾಟೀಲ ಮೌನಾನುಷ್ಠಾನ ಕುರಿತು ಮಾತನಾಡಿದರು.
ಮೌನಾನುಷ್ಠಾನ ಕೈಗೊಂಡ ಮಲ್ಲಪ್ಪಜ್ಜನವರಿಗೆ ತುಲಾಭಾರ ನೆರವೇರಿಸಲಾಯಿತು. ಶಿವಬಸವ ಶ್ರೀ, ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಬದಾಮಿ ತಾಲೂಕು ಹೂಲಗೇರಿಯ ಸಿದ್ದರಾಮ ಶಿವಯೋಗೀಶ್ವರವುಠದ ವೀರಯ್ಯ ಸ್ವಾಮೀಜಿ, ಬೀಳಗಿ ಯತ್ನಟ್ಟಿ ಸಿದ್ದಸಂಸ್ಥಾನ ಹಿರೇಮಠದ ಚಿದಾನಂದ ಶ್ರೀ, ಕಣಗಿನಹಾಳದ ಸಿದ್ದೇಶ್ವರ ಶ್ರೀಗಳು, ಪಪಂ ಉಪಾಧ್ಯಕ್ಷೆ ಅನ್ನಪೂರ್ಣ ಗಿಂಡಿ, ಸದಸ್ಯ ಕಲ್ಮೇಶ ತೊಂಡಿಹಾಳ, ಎಸ್.ಬಿ. ಬಸವರಡ್ಡೇರ, ಬಿ.ಎಂ. ಹುಲಗೇರಿ, ಯಲ್ಲಪ್ಪ ಮಣ್ಣವಡ್ಡರ, ಎ.ಎಸ್. ಮಡಿವಾಳರ, ಯಲ್ಲವ್ವ ಕೊಂಡಿ, ರಮೇಶ ಕಳಕೊಣ್ಣವರ, ಜಯಶ್ರೀ ನಾಶಿಪುಡಿ, ಶೇಖಪ್ಪ ಮುಗಳಿ, ಅಣ್ಣಪ್ಪ ಜೋಳದ, ಬಸಪ್ಪ ನಾಶಿಪುಡಿ ಇದ್ದರು. ಶಿಕ್ಷಕ ಆನಂದ ಕಮಲಾಕರ ನಿರೂಪಿಸಿದರು.