ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಗೀತಕ್ಕೆ ಒಲಿಯದ ಮನವಿಲ್ಲ

Vishwanath S
Updated On : 2 Sept 2013, 11:17 am

ಲಕ್ಷ್ಮೇಶ್ವರ: ಸಂಗೀತಗಾರರಿಗೆ ಗುರುವಿನ ಆಶೀರ್ವಾದವಿದ್ದರೆ ಸಂಗೀತ ಸರಸ್ವತಿ ಅವರ ನಾಲಿಗೆ ಮೇಲೆ ನಲಿದಾಡುವಳು. ಭಾರತೀಯ ಸಂಗೀತದ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವು ನಿರಂತರವಾಗಿ ಸಾಗಬೇಕಾಗಿದೆ ಎಂದು ಕುಂದಗೋಳದ ಸವಾಯಿ ಗಂಧರ್ವ ವಿಶ್ವ ಸಮಿತಿಯ ಸದಸ್ಯ ಅರವಿಂದ ಕಟಗಿ ಹೇಳಿದರು.
ಅವರು ಶನಿವಾರ ಪಟ್ಟಣದ ಶಂಕರ ಭಾರತಿಮಠದ ಸಮುದಾಯ ಭವನದಲ್ಲಿ ಶ್ರಾವಣ ಸಂಜೆ ಸಂಗೀತ ಸೇವಾ ಸಮಿತಿ ಆಶ್ರಯದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತದ ಕಲಾವಿದರು ಯಾವಾಗಲು ಬಡತನದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದರೂ ಸಂಗೀತ ಸಾಧನೆಯಲ್ಲಿ ಅವರು ಶ್ರೀಮಂತರಾಗಿರುತ್ತಾರೆ. ಸಂಗೀತವೆಂಬುದು ಆಳವಾದ ಸಾಗರವಿದ್ದಂತೆ, ಅದನ್ನು ಎಷ್ಟು ಸವಿದರೂ ಕಡಿಮೆಯೇ ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ಇದೇ ಸಂದರ್ಭ ನಾಡಿನ ಖ್ಯಾತ ಸಂಗೀತ ಕಲಾವಿದರು ವಿವಿಧ ರಾಗ, ತಾಳಗಳನ್ನು ಪ್ರಸ್ತುತ ಪಡಿಸಿ ಜನರ ಮೆಚ್ಚುಗೆ ಪಡೆದರು. ಪಂಡಿತ ಡಿ.ಕುಮಾರದಾಸ, ಶ್ರೀಕಾಂತ ಬಾಕಳೆ, ಕೃಷ್ಣೇಂದ್ರ ವಾಡೇಕರ್, ಬಾಲ ಕಲಾವಿದೆ ಶ್ರೇಯಾ ಕುಲಕರ್ಣಿ ಅದ್ಭುತವಾಗಿ ಗಾಯನ ಪ್ರಸ್ತುತಪಡಿಸಿದ್ದು ವಿಶೇಷ. ಖ್ಯಾತ ಕೊಳಲು ವಾದಕ ಹರೀಶ ಕುಲಕರ್ಣಿ ತಮ್ಮ ಬಾನ್ಸುರಿ ವಾದನದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಗದಗ ಪಿಪಿಜಿ ಮ್ಯೂಜಿಕ್ ಕಾಲೇಜಿನ ಪ್ರೊ. ಹನುಮಂತಕುಮಾರ ಕೊಡಗಾನೂರ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಎಸ್.ಡಿ.ಜವಾಯಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಡಾ. ಎಸ್.ಬಿ.ಜವಾಯಿ ವಹಿಸಿದ್ದರು. ಗೋಪಾಲಾಚಾರ್ಯ ಹೊಂಬಳ, ಪುರಸಭೆಯ ಸದಸ್ಯ ಮಹೇಶ ಹೊಗೆಸೊಪ್ಪಿನ, ಬಸವರಾಜ ಬಾಳೇಶ್ವರಮಠ, ನಾಗರಾಜ ಕುಲಕರ್ಣಿ, ಬಸವರಾಜ ತಿರ್ಲಾಪುರ, ಟಾಕಪ್ಪ ಸಂಶೀಕರ, ವಿ.ಎಲ್. ಪೂಜಾರ ಹಾಜರಿದ್ದರು. ಸತೀಶ ಮಾಂಡ್ರೆ ಪ್ರಾಸ್ತಾವಿಕ ಮಾತನಾಡಿದರು. ದಿಗಂಬರ ಪೂಜಾರ ಸ್ವಾಗತಿಸಿದರು. ಕಿರಣ ನಾಯಕ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement