ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂಧರು ಸಮಾಜಕ್ಕೆ ಹೊರೆಯಲ್ಲ: ಬೇಲೂರ

Vishwanath S
Updated On : 3 Sept 2013, 11:21 am

ಗದಗ: ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಅಂಧ ಮಕ್ಕಳಿಗೆ ಸಂಗೀತ ವಿದ್ಯೆ ಕಲಿಸಿ ಸ್ವಾವಲಂಬಿ ಜೀವನ ನಡೆಸುವಂತೆ ಪ್ರೇರೆಪಿಸಿದ್ದರಿಂದಾಗಿ ಇಂದು ಅಂಧ ಮಕ್ಕಳು ಸಮಾಜಕ್ಕೆ ಹೊರೆಯಾಗದೆ ಸಮಾಜದ ದೊರೆಯಾಗಿದ್ದಾರೆ ಎಂದು ಪ್ರಾಚಾರ್ಯ ಕೆ.ಎಚ್. ಬೇಲೂರ ಹೇಳಿದರು.
ಅವರು ಈಚೆಗೆ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಡಾ. ಪುಟ್ಟರಾಜ ಕವಿ ಗವಾಯಿಗಳವರ ಸಾಧನೆ ಅಮೋಘವಾದದ್ದು. ಅವರು ಏನಾದರೂ ವಿದೇಶದಲ್ಲಿ ಜನಿಸಿದ್ದರೆ ಅವರಿಗೆ ಒಂದು ಅಲ್ಲ 2 ನೋಬೆಲ್ ಪ್ರಶಸ್ತಿಗಳು ಬರುತ್ತಿದ್ದವು. ಸಂಗೀತಕ್ಕೆ ಅಪಾರವಾದ ಶಕ್ತಿಯಿದೆ ಇದೇ ಸಾಹಿತಿ ಎಸ್.ಎಲ್. ಭೈರಪ್ಪನವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಜೀವನವೇ ಸಾಕು ಎಂದುಕೊಂಡಾಗ ಭಾರತರತ್ನ ಪಂ. ಭೀಮಸೇನ ಜೋಶಿಯವರ ಸಂಗೀತವನ್ನು ಕೇಳಿ ಮನಪರಿವರ್ತಿಸಿಕೊಂಡು, ಜೀವನದ ಗುರಿ ಸಾವೇ ಅಲ್ಲ. ಅದು ಸಾಧನೆಯೆಂದು ತಿಳಿದು       ಅವರು ಇಂದು ಸಾಹಿತ್ಯ ಲೋಕದಲ್ಲಿ ರಾರಾಜಿಸುವಂತೆ ಆಗಿದೆ ಎಂದರು. ಈ ಸಂಸ್ಥೆಯ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರವೀಂದ್ರ ಜಕಾತಿ, ಸಾನ್ನಿದ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿದರು.
ಒಕ್ಕೂಟದ ಉಪಾಧ್ಯಕ್ಷ ಪ್ರೊ. ರಾಜೀವ ಹಿರೇಮಠ, ಎಸ್.ಎಸ್. ಗಡ್ಡದಮಠ, ಕಾಲೇಜಿನ ಪ್ರಧಾನಕಾರ್ಯದರ್ಶಿ ಅಶ್ವಿನಿ ಹಿರಗುಳಿ ಇದ್ದರು. ಪ್ರೊ.ಎಸ್.ಎಸ್.ಗಡ್ಡದಮಠ ಸ್ವಾಗತಿಸಿದರು. ಡಾ. ಮೃತ್ಯುಂಜಯ ಶೆಟ್ಟರ ನಿರೂಪಿಸಿದರು. ಗುರುನಾಥ ಸುತಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement