ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬುದ್ಧಿಶಕ್ತಿ ಬೆಳವಣಿಗೆಗೆ ಪೌಷ್ಟಿಕ ಆಹಾರ ಅಗತ್ಯ

Vishwanath S
Updated On : 3 Sept 2013, 11:20 am

ಗದಗ: ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಪೌಷ್ಟಿಕ ಆಹಾರ ಅಗತ್ಯ ಎಂದು ಡಾ. ಸತೀಶ ಹೊಂಬಾಳಿ ಹೇಳಿದರು.
ಅವರು ಈಚೆಗೆ ಬಿಪಿನ್ ಚಿಕ್ಕಟ್ಟಿ ಅಂತಾರಾಷ್ಟ್ರೀಯ ಫ್ರೀ ಸ್ಕೂಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಇಂದಿನ ಆಧುನಿಕ ಜಗತ್ತಿನಲ್ಲಿ ಜನರ ಆಹಾರ ಪದ್ಧತಿ ಕೂಡ ಬದಲಾಗಿದೆ. ನಾವೆಲ್ಲ ಈಗಿನ ಯುಗವನ್ನು ಫ್ಯಾಶನ್ ಯುಗವೆಂದು ಕರೆಯುತ್ತೇವೆ. ಆದರೆ, ಈ ಫ್ಯಾಶನ್ ಎಂಬ ಭೂತ ಕೇವಲ ಉಡುಗೆ, ತೊಡುಗೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಅದು ಅವರು ಸೇವಿಸುವ ಆಹಾರ ಪದ್ಧತಿಯ ಮೇಲೆಯೂ ಪರಿಣಾಮ ಬೀರಿದೆ. ಇಂದು ಒಬ್ಬ ವ್ಯಕ್ತಿ ರೊಟ್ಟಿ, ಚಪಾತಿ, ಜೋಳದ ಸಂಗಟಿ, ರಾಗಿರೊಟ್ಟಿ ಸೇವಿಸುತ್ತಾನೆ ಎಂದರೆ ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂದು ಭಾವಿಸುವ ಜನರಿದ್ದಾರೆ. ಇಂದು ನಮ್ಮ ಯುವಜನತೆ ಫೀಜಾ, ಬರ್ಗರ್ ಸೇವಿಸುವುದು, ಅದೇ ರೀತಿ ಇಂದಿನ ತಾಯಂದಿರು ತಮ್ಮ ಮಕ್ಕಳಿಗೆ ಸಾತ್ವಿಕ ಆಹಾರ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಅಂದರೆ ಪೌಷ್ಟಿಕ ಆಹಾರ ತಯಾರಿಕೆಗೆ ತಾಯಂದಿರಿಗೆ ಸಮಯದ ಅಭಾವ ಕಂಡುಬರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.  ಪಾಲಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯ. ಅದೇ ರೀತಿ ಮಕ್ಕಳಿಗೆ ಮೊಳಕೆ ಕಾಳು, ಹಣ್ಣು, ಹಾಲು, ತರಕಾರಿ ಸೇರಿದಂತ ಇನ್ನಿತರೇ ಪೌಷ್ಟಿಕಾಂಶ ನೀಡುವಂತಹ ಆಹಾರವನ್ನು ತಯಾರಿಸಿ ಮಕ್ಕಳಿಗೆ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಕೆ. ಕಿರೇಸೂರ ಮಾತನಾಡಿದರು.  ಸಂಸ್ಥೆಯ ಸಂಸ್ಥಾಪಕ ಪ್ರೊ. ಎಸ್.ವೈ. ಚಿಕ್ಕಟ್ಟಿ, ಶಾಲೆಯ ಶಿಕ್ಷಕಿ ಮಿಸ್ ಆಖಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಿಸ್ ಆಯಿನ್ ಸ್ವಾಗತಿಸಿದರು. ಶೋಭಾ ಭಟ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement