ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶೋಷಣೆ ಮುಕ್ತ ಮಹಿಳಾ ಸಮಾಜ ಬೇಕು

Vishwanath S
Updated On : 3 Sept 2013, 11:21 am

ಗದಗ: ಮಹಿಳೆಯರ ಮೇಲಾಗುತ್ತಿರುವ ಶೋಷಣೆ ತಪ್ಪಿ ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ದೊರೆತಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಲಭಿಸುತ್ತದೆ ಎಂದು ಡಾ. ಸುಜಾತಾ ಅಭಿಪ್ರಾಯ ಪಟ್ಟರು. ಅವರು ಈಚೆಗೆ ನಗರದ ಶಿವಾನಂದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. ಮಹಿಳೆಯರ ಮೇಲೆ ಅತ್ಯಾಚಾರದಂತಕ ಕೃತ್ಯಗಳು ಜರುಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಮಹಿಳೆಯರ ಮೇಲಾಗುತ್ತಿರುವ ಇಂಥ ದೌರ್ಜನ್ಯ ನಿಯಂತ್ರಿಸಲು ಬರೀ ಕಠಿಣ ಕಾನೂನುಗಳನ್ನು ರಚಿಸದೆ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಿದಾಗ ಮಾತ್ರ ಮಹಿಳೆಯರು ಸಮಾಧಾನದಿಂದ ಬದುಕಬಲ್ಲರು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ವಿ. ಸಂಕನೂರ ಮಾತನಾಡಿ, ಇಂದು ಸಮಾಜದಲ್ಲಿ ಮಹಿಳೆಗೆ ಸೂಕ್ತ ಸ್ಥಾನಮಾನ ದೊರಕಬೇಕಾಗಿದೆ. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಅಂದಾಗ ಅತ್ಯಾಚಾರಿ ಪ್ರಕರಣಗಳ ನಿಯಂತ್ರಣ ಸಾಧ್ಯ ಎಂದರು. ಪ್ರೊ. ಬಿ.ಎಸ್. ಹಳ್ಳದ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಸಂಗೀತಾ ಕೋಲ್ಕರ ಪ್ರಾರ್ಥಿಸಿದರು. ಕೌಸಲ್ಯ ರಡ್ಡೇರ ಸ್ವಾಗತಿಸಿದರು. ಸುಸ್ಮಿತಾ ಜೋಷಿ ನಿರೂಪಿಸಿದರು. ನಂದಾ ಭರಮಗೌಡರ ವಂದಿಸಿದರು.
ದೇಶದ ಸಂಸ್ಕೃತಿ ಬೆಳೆಸುವ ಕಾರ್ಯ ಕೈಗೊಳ್ಳಿ
ನರಗುಂದ: ಹಲವಾರು ಋಷಿ ಮನಿಗಳು ಬಾಳಿ ಹೋದ ಈ ನಾಡಿನಲ್ಲಿ ಸಂಸ್ಕೃತಿ ಸಾಕಷ್ಟು ಶ್ರೀಮಂತವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಸಂಸ್ಕೃತಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ಲಯನ್ಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಹೇಳಿದರು. ಅವರು ಈಚೆಗೆ ಪಟ್ಟಣದ ಲಯನ್ಸ್ ಸ್ವತಂತ್ರ ಪದವಿ ಪೂರ್ವ ಕಾಲೇಜ್‌ನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಇಂದಿನ ಆಧುನಿಕ ಯುಗದಲ್ಲಿ ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವುದರಿಂದ ನಮ್ಮ ದೇಶೀ ಸಂಸ್ಕೃತಿಯು ಇಂದು ಮರೆಯಾಗುತ್ತಿದೆ. ನಮ್ಮ ಭಾರತ ಸಂಸ್ಕೃತಿಯು ಅತೀ ಪುರಾತನ ಹಾಗೂ ವಿಶೇಷತೆ ಹೊಂದಿದ್ದು, ವಿದೇಶಿಗರೂ ನಮ್ಮ ಸಂಸ್ಕೃತಿಗೆ ಮಾರುಹೋಗಿ ದೇಶದ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬೆಳೆಸುವ ಕಾರ್ಯಮಾಡಬೇಕಾಗಿದೆ ಎಂದರು. ಸಿ.ಎಸ್. ಮಡಿವಾಳರ ಮಾತನಾಡಿ, ವಿದ್ಯಾರ್ಥಿಗಳಿಗೋಸ್ಕರ ಶಿಕ್ಷಣ ಇಲಾಖೆ ಎಲ್ಲೆಡೆ ರಾಷ್ಟ್ರೀಯ ಸದ್ಭಾವನೆ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಇದರ ಅಡಿ ಎಲ್ಲ ಕಾಜೇಜುಗಳಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಸ್ಫರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಉಪನ್ಯಾಸಕ ವಿ.ಎಸ್. ಗಂಗೂರ, ಸಿ.ವಿ. ಜಗಲಿ, ಎನ್.ವಿ. ಚಂದ್ರತ್ತನವರ, ಎಚ್.ವೈ. ಹೊಸಳ್ಳಿಮಠ, ವಿ.ಎಫ್. ಹದ್ಲಿ, ಅಶ್ವಿನಿ ಜಾಮದಾರ, ಜೆ.ಕೆ.ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಬಾಹುಬಲಿ ವಡವಿ ಸ್ವಾಗತಿಸಿದರು. ಅರ್ಚನಾ ಗುಡ್ಡಿಮಠ ನಿರೂಪಿಸಿದರು. ಅಕ್ಕಮ್ಮ ಕೆರೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement