ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೈಜ ಕಲೆಯಿಂದ ಸರ್ವತೋಮುಖ ಬೆಳವಣಿಗೆ

Vishwanath S
Updated On : 4 Sept 2013, 12:29 pm

ಕನ್ನಡಪ್ರಭ ವಾರ್ತೆ, ಗದಗ, ಸೆ. 3
ಆದಿ ಮಾನವನ ರೇಖೆಗಳಿಗೆ ಬಣ್ಣಗಳ ಲೇಪನಮಾಡಿ ನೆರಳು-ಬೆಳಕಿನಾಟಗಳಲ್ಲಿ ಬಣ್ಣಗಳ ನೈಜತೆಯನ್ನು ಸೃಷ್ಟಿಸುವುದೇ ಕಲೆಯಾಗಿದೆ. ಆ ಕಲೆಯೇ ಆತ್ಮಾನಂದ ನೀಡುವ ಮಾಧ್ಯಮವಾಗಿ ರಚನೆಯಾದದ್ದೇ ನೈಜಕಲೆ, ಪ್ರತಿಯೊಬ್ಬ ಕಲಾವಿದ ಹಾಗೂ ವಿದ್ಯಾರ್ಥಿಗಳು ಕಲೆಯ ಮೂಲಕ ಶಿಕ್ಷಣವಾದ ನೈಜಕಲೆ ಅಧ್ಯಯನ ಮಾಡಿದರೆ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ ಎಂದು ಕಲಾವಿದ ಮಂಜುನಾಥ ವಾಲಿ ಹೇಳಿದರು.
ಅವರು ಈಚೆಗೆ ವಿಜಯ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾನುಭವ ಚಿಂತನಗೋಷ್ಠಿಯಲ್ಲಿ ನೈಜಕಲೆ ಮತ್ತು ನವ್ಯ ಕಲೆಗಳ ಕುರಿತು ಉಪನ್ಯಾಸ ನೀಡಿದರು. ಕಲೆ ಆತ್ಮಾನಂದ ನೀಡುವುದಷ್ಟೇ ಅಲ್ಲ, ಆತ್ಮ ವಿಕಾಸಗೊಳಿಸುವ ಮಾಧ್ಯಮವಾಗಿ ಸಮಾಜವನ್ನು ಕಲಾವಿದ ತಾನು ಕಂಡಂತೆ ಬಣ್ಣ, ರೇಖೆಗಳ ಮುಖಾಂತರ ಜಾಗೃತಗೊಳಿಸುವುದಕ್ಕಾಗಿ, ಹೊಸತನ ಹುಡುಕಾಟಕ್ಕಾಗಿ ತಮ್ಮದೆಯಾದ ಶೈಲಿಯಲ್ಲಿ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾ ಕಲೆಯ ವೈವಿಧ್ಯತೆಯನ್ನು ಹೆಚ್ಚಿಸಲು ಕಾರಣವಾಯಿತು. ಇಂದಿನ ಜನಾಂಗದ ಮನಸ್ಥಿತಿಗೆ ಅನುಗುಣವಾಗಿ ಕಲೆಯ ಬದಲಾವಣೆಗಾಗಿ ತಮ್ಮ ವಿಸ್ತಾರತೆಯನ್ನು ಹೆಚ್ಚಿಸಿಕೊಂಡು ಕಲೆ ವಿಲಾಸಕ್ಕೆ ಅಷ್ಟೇ ಅಲ್ಲ ವಿಕಾಸಕ್ಕಾಗಿ ಎಂದರು. ಕಾಲೇಜಿನ ಪ್ರಾಚಾರ್ಯ ಸಿ.ವಿ. ಬಡಿಗೇರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹೊಂದಲು ಅವರನ್ನು ಪ್ರಬುದ್ಧರನ್ನಾಗಿ ಮಾಡಲು 15 ದಿನಕ್ಕೊಮ್ಮೆ ಕಲೆ ಕುರಿತು ಕಲಾನುಭವ ಚಿಂತನಗೋಷ್ಠಿಯಂತಹ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್. ಕಮ್ಮಾರ, ಕೃಷ್ಣಾ, ವಿ.ಬಿ. ಪರ್ವತಗೌಡ, ಎಸ್.ವಿ. ಗುಂಜಾಳ, ಬಿ.ಸಿ. ಕುತ್ನಿ, ವಿ.ಎಫ್. ಕುಂದ್ರಳ್ಳಿ, ಪ್ರಶಾಂತ, ಎಸ್.ಎಚ್. ಹಡಪದ, ಶಾಂತಿನಾಥ, ಸುನೀಲ, ನಾಗರಾಜ ಬಾಕಳೆ, ಶಿವು, ರಾಜು ಉಪಸ್ಥಿತರಿದ್ದರು. ಬಸವರಾಜ ನೆಲಜೇರಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement