ಹಿರೇಹಳ್ಳ ಪ್ರವಾಹ: 2ಎತ್ತು ಸಾವು
ರೋಣ: ಹಿರೇಹಳ್ಳದ ಪ್ರವಾಹಕ್ಕೆ ಸಿಲುಕಿ ಎರಡು ಎತ್ತುಗಳು ಮೃತಪಟ್ಟು, ಚಕ್ಕಡಿಯೊಂದಿಗೆ ಕೃಷಿ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಹೋದ ಘಟನೆ ಮಂಗಳವಾರ ತಾಲೂಕಿನ ಹುಲ್ಲೂರು ಗ್ರಾಮದ ಸಮೀಪ ನಡೆದಿದೆ. ಹುಲ್ಲೂರಿನ ರೈತ ಶಿವನಗೌಡ ಟಗರಿ ಎಂಬುವರು ಚಕ್ಕಡಿಯಲ್ಲಿ ಕೃಷಿ ಸಾಮಗ್ರಿ ಹೇರಿಕೊಂಡು ಹಳ್ಳದ ಆಚೆಗೆ ಹಿನಗುಂಡಿ ಗ್ರಾಮದ ಸಮೀಪ ಇರುವ ಹೊಲಕ್ಕೆ ಹೋಗಲು ಹಳ್ಳದಾಟುತ್ತಿದ್ದರು. ಆಗ ನೀರು ರಭಸವಾಗಿ ಹರಿದಿದ್ದರಿಂದ ಎತ್ತುಗಳು ಚಕ್ಕಡಿ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿವೆ. ಚಕ್ಕಡಿಯಲ್ಲಿದ್ದ ಶಿವನಗೌಡ ಟಗರಿ, ಮುತ್ತನಗೌಡ ಟಗರಿ ಮತ್ತು ನವೀನಗೌಡ ಟಗರಿ ಎಂಬುವರು ಈಜಿ ದಡ ಸೇರಿದ್ದಾರೆ.