'ಶತ್ರು' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ: ಪ್ರೇಮ್
ಗದಗ: ಬಿಹಾರ ರಾಜ್ಯದಲ್ಲಿ ನಡೆದ ಪೊಲೀಸ್ ಅಧಿಕಾರಿಯೊಬ್ಬನ ಜೀವನದ ನೈಜ ಘಟನೆ ಆಧಾರಿತ ಶತ್ರು ಚಲನಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಅದ್ಭುತವಾದ ಪ್ರಾರಂಭ ದೊರಕಿದೆ ಎಂದು ಚಿತ್ರದ ನಾಯಕನಟ ಪ್ರೇಮ್ ಹೇಳಿದರು.
ಅವರು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಚಿತ್ರದಲ್ಲಿ ಉ-ಕದ ಗಂಡುಮೆಟ್ಟಿನ ಭಾಷೆ ಬಳಸಲಾಗಿದ್ದು, ಬಹುತೇಕ ಹುಬ್ಬಳ್ಳಿ, ಧಾರವಾಡ, ಸವದತ್ತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದ ಮೂಲಕ ಲವರ್ ಬಾಯ್ ಪಾತ್ರದಿಂದ ಪ್ರಥಮ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದು, ಪಾತ್ರಕ್ಕೆ ಬೇಕಾದ ಸಿದ್ಧತೆಗಳಿಗಾಗಿ 1 ವರ್ಷಗಳ ಕಾಲ ಸಮಗ್ರ ತರಬೇತಿ ಪಡೆದಿದ್ದೇನೆ. ನನ್ನ ಈ ಹಿಂದಿನ ಚಲನಚಿತ್ರಗಳಿಗೆ ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ದೊರೆತಿದ್ದು, ಈ ಭಾಗದ ಪ್ರೇಕ್ಷಕರಿಗೆ ನಾನು ಚಿರಋಣಿ ಎಂದರು.
ಚಿತ್ರದ ನಿರ್ಮಾಪಕ ಎಂ.ಡಿ. ಪ್ರಕಾಶ್, ಖಳನಟ ಪಾತ್ರದಾರಿ ಅರುಣ, ಸಚಿನ್ ಪಾಟೀಲ, ವಿಕಾಸ ಸಾಹುಕಾರ, ವಿ.ಆರ್. ಗೋವಿಂದಗೌಡ, ಸಿದ್ದು ಪಾಟೀಲ ಇದ್ದರು.