ಶಿಕ್ಷಕ ಸಮಾಜ ತಿದ್ದುವ ಶಿಲ್ಪಿ: ಶಾಸಕ ಜಿ.ಎಸ್. ಪಾಟೀಲ
ರೋಣ: ಮಕ್ಕಳ ಹೃದಯದಲ್ಲಿ ಅಕ್ಷರ ಬೀಜ ಬಿತ್ತುವುದರ ಜತೆಗೆ ಉತ್ತಮ ಚಾರಿತ್ರ್ಯ, ಬದುಕುವ ಸಾಮರ್ಥ್ಯ ಕಲಿಸುವುದರೊಂದಿಗೆ ದಾರಿ ತಪ್ಪುತ್ತಿರುವ ಸಮಾಜವನ್ನು ತಿದ್ದುವಲ್ಲಿ ಶಿಕ್ಷಕ ಮಹಾನ್ ಶಿಲ್ಪಿಯಾಗಿದ್ದಾನೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಗುರುವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜಿಪಂ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಸುಂದರವಾದ ಗುರುಭವನ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು. ನರಗುಂದ ಶಾಸಕ ಬಿ.ಆರ್. ಯಾವಗಲ್ ಮಾತನಾಡಿದರು. ದಿ. ಆರ್.ಎಸ್. ಪಾಟೀಲ್ ಪ್ರತಿಷ್ಠಾನದಿಂದ ಕೊಡಮಾಡಲ್ಪಟ್ಟ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 40 ಶಿಕ್ಷಕರಿಗೆ ನೀಡಿ, ಗೌರವಿಸಲಾಯಿತು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಐ.ಎಸ್. ಪಾಟೀಲ, ಗುಲಗಂಜಿಮಠದ ಗುರಪಾದ ಶ್ರೀಗಳು, ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡೇರ, ನಿಂಗಪ್ಪ ಬೇವಿನಮರದ, ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಮಿಥುನ ಪಾಟೀಲ, ದಶರಥ ಗಾಣಿಗೇರ, ಪರಶುರಾಮ ಅಳಗವಾಡಿ, ಪ್ರಭು ಮೇಟಿ, ಸಿ.ಕೆ. ಸುಂಕದ, ವೀರಣ್ಣ ಶೆಟ್ಟರ, ವಿ.ಎನ್. ಅಮಾತಿಗೌಡ್ರ, ವೈ.ಡಿ. ಗಾಣಿಗೇರ, ಎಸ್.ಆರ್. ದೊಡ್ಡಮನಿ, ಶಫೀಕ ಮೂಗನೂರ, ವಿ.ಆರ್. ಗುಡಿಸಾಗರ, ಜಿ.ಪಂ ಎಇಇ ಕೆ.ಎಲ್. ಕಟ್ಟಿಮನಿ, ಪ್ರಭಾರ ತಹಸೀಲ್ದಾರ್ ಎನ್.ಎಸ್. ಕೂಡಲ, ಎಸ್.ಎಚ್. ನೈನಾಪುರ, ಎಸ್.ಎಸ್. ಭರಡ್ಡಿ, ಸಿ.ಕೆ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಎಸ್.ಬಿ. ಗವಿ, ಎಂ.ವೈ. ಜಕ್ಕರಸಾನಿ ನಿರೂಪಿಸಿದರು. ಬಿಇಓ ಕೆ.ವಿ. ಪಾಟೀಲ ಸ್ವಾಗತಿಸಿದರು. ಎಸ್.ವೈ. ಯಡಳ್ಳಿ ವಂದಿಸಿದರು.